ಗುಂಡ್ಲುಪೇಟೆ. ಪಟ್ಟಣದ ಗುರುಭವನದಲ್ಲಿ ನಡೆದ ಜಯ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವವನ್ನು ಜಿಲ್ಲಾ ಅಧ್ಯಕ್ಷರಾದ ಎಸ್. ಈಶ್ವರ್ ಮತ್ತು ತಾಲೂಕು ಅಧ್ಯಕ್ಷರಾದ ಅನ್ಸರ್ ರವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೆ.ಸಿ. ರಾಜಪ್ಪನವರು ಕಾರ್ಯಕ್ರಮಕ್ಕೆ ದೀಪ ಬೆಳಗುವಮೂಲಕ ಚಾಲನೆಯನ್ನು ನೀಡಿದರು. ನಂತರ ಮಾತನಾಡಿದ ಅವರು ಕನ್ನಡ ನೆಲ ಜಲ ಭಾಷೆ ಮತ್ತು ಸಂಸ್ಕೃತಿಗೆ ಹೆಚ್ಚು ಹೊತ್ತು ಕೊಡಬೇಕು. ಎಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತದೆ ಅಲ್ಲಿ ಕನ್ನಡಪರ ಸಂಘಟನೆಗಳು ಮತ್ತು ಕನ್ನಡಿಗರು ಧ್ವನಿ ಯಾಗಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ನಂತರ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಮನೋರಂಜನೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಇದೆ ವೇಳೆಯಲ್ಲಿ ಯೂಟ್ಯೂಬ್ ಚಾನೆಲ್ ಓ ನನ್ನ ನಲ್ಲೆ ಆಡಿಯೋ ರಿಲೀಸ್ ಮಾಡಲಾಯಿತು. ಮತ್ತು ರೈತ ಗೀತೆ ಪೋಸ್ಟರನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಜಗದೀಶ್, ಮಹಿಳಾ ಘಟಕದ ಅಧ್ಯಕ್ಷರಾದ ಪುಟ್ಟಮ್ಮ, ಮಾಜಿ ಕಾಡ ಅಧ್ಯಕ್ಷರಾದ ಎಚ್ ಎಸ್ ನಂಜಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಎನ್ ಮಲ್ಲೇಶ್,ರಾಜ್ಯ ಕಬ್ಬು ಬೆಳೆಗಾರರ ಅಧ್ಯಕ್ಷರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಯುವ ವಿಜ್ಞಾನಿ ಡಾ. ನವೀನ್ ಮೌರ್ಯ, ಕೆಎಸ್‌ಆರ್‌ಟಿಸಿ ವಿಠಲ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರೇಖಾ ಭಾಸ್ಕರ್, ಶ್ರೀಮತಿ ಸವಿತಾ, ಸುಭಾಷ್ ಮಡ್ರಹಳ್ಳಿ, ಬಿಜಿ ಶಿವಕುಮಾರ್,ಉಲ್ಲಾಸ್ ಅಬ್ದುಲ್ ಮಾಲಿಕ್, ರಮೇಶ್ ನಾಯಕ್,ಸುರೇಶ್ ನಾಯಕ್,ಸೋಮಣ್ಣ, ರಮೇಶ್ ನಾಯಕ್, ರಾಜೇಂದ್ರ, ನಿರೂಪಕರಾಗಿ ಹೂರದಹಳ್ಳಿ ಎಚ್ ಎಮ್ ಪ್ರಸಾದ್, ಕಾಳಿಂಗ ಸ್ವಾಮಿ ಸಿದ್ದಾರ್ಥ್, ಎಸ್ ಮುಬಾರಕ್, ಹಿರಿಯ ಕನ್ನಡಪರ ಹೋರಾಟಗಾರ ಬ್ರಹ್ಮಾನಂದ, ನಾಟಕ ಭಾರ್ಗವ ಕೆಂಪರಾಜು ಸೇರಿದಂತೆ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರುಗಳು ಮಹಿಳೆಯರು ಕನ್ನಡದ ಅಭಿಮಾನಿಗಳು ಉಪಸ್ಥಿತರಿದ್ದರು.
ಭಾವನಾ ಟಿವಿ ಗಾಗಿ ಸದಾನಂದ ಕಣ್ಣೆಗಾಲ ಗುಂಡ್ಲುಪೇಟೆ
About The Author


More Stories
ಗುಂಡ್ಲುಪೇಟೆ ಪುರಸಭೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ: ಮಾಧ್ಯಮ ಪ್ರತಿನಿಧಿ ಶ್ರೀಮತಿ ತಾರಾ ನಾಗೇಂದ್ರ ಅವರಿಗೆ ಗೌರವ ಸನ್ಮಾನ
ನಮ್ಮ ಪರಂಪರೆ ನಮ್ಮ ಹೆಮ್ಮೆ, ಸಂರಕ್ಷಣೆ ನಮ್ಮ ಜವಾಬ್ದಾರಿ: ತೆರಕಣಾಂಬಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಶ್ರಮದಾನ
ನಿವೃತ್ತ ಯೋಧರಿಗೆ ಅದ್ದೂರಿ ಮೆರವಣಿಗೆ, ಅಭಿನಂದನಾ ಸಮಾರಂಭ