ಕುಮಟಾ : ತಾಲೂಕಿನ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಮಹಾಶಿವರಾತ್ರಿಯ ಪ್ರಯುಕ್ತ ‘ನಾಗನೆಲೆ’ ಯ ಅಂಗಣದಲ್ಲಿ “ವಂದೇ ಮಹಾಲಿಂಗ” ಕಾರ್ಯಕ್ರಮವು ವಿಶಿಷ್ಟವಾಗಿ ನಡೆಯಿತು.
ಶಿವಲಿಂಗಕ್ಕೆ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿಯವರ ಅದ್ದ್ವೈರ್ಯದಲ್ಲಿ ಸಾಮೂಹಿಕವಾಗಿ ಜಲಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತಾಭಿಭಿಷೇಕ, ಬಿಲ್ವಾರ್ಚನೆ ಹಾಗೂ ಪುಷ್ಪಾರ್ಚನೆ ಸಹಿತ ಪಂಚ ವಿಧ ಸೇವೆಯನ್ನು ವಿದ್ಯುಕ್ತವಾಗಿ ಸಲ್ಲಿಸಿ, ಸರ್ವರ ಒಳಿತಿಗಾಗಿ ಪ್ರಾರ್ಥಿಸಲಾಯಿತು.
ನಂತರದಲ್ಲಿ ಬರ್ಗಿಯ ಮನೆ ಮದ್ದು ಖ್ಯಾತಿಯ ಅಶೋಕ ದಯಾನಂದ ಪಂಡಿತ್ ರವರನ್ನು ಹಾಗೂ ಕರ್ನಾಟಕ ರಣಧೀರ ವೇದಿಕೆಯ ಕುಮಟಾ ತಾಲ್ಲೂಕಾ ಘಟಕದ ಅಧ್ಯಕ್ಷರಾದ ಕನ್ನಡಪರ ಹೋರಾಟಗಾರರಾಗಿರುವ ಸೌಹಾರ್ದತೆಗೆ ಹೆಸರಾದ ಮಿರ್ಜಾನಿನ ಕನ್ನಡದ ಸಮೀರರಿಗೆ ವಿದ್ಯಾಪೀಠದಿಂದ “ಕನ್ನಡ ಭಾರತೀ ಪ್ರಪಂಚ” ದ ಸಂಚಾಲಕರಾದ ನಾರಾಯಣ ನಾಗು ನಾಯಕರವರು ಸಪತ್ನಿಕರಾಗಿ “ಶಿವಮನ್ನಣೆ” ಇತ್ತು ಗೌರವಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕಾ ಪಂಚಾಯತದ ಮಾಜಿ ಅಧ್ಯಕ್ಷರಾದ ವಿಜಯಾ ಪಟಗಾರ, “ನಾಗನೆಲೆ” ಯ ಯಜಮಾನಿ ಹನಮು ನಾಯಕ, ಮಹಾದೇವಿ ಗುನಗಾ, ನಂದನ ನಾಯಕ, ಎನ್. ನಾಗಲಕ್ಷ್ಮೀ, ನಾಗರಾಜ ಶೆಟ್ಟಿ, ಮಾನವಿ ಶಿವಾನಂದ ನಾಯಕ ಹಾಗೂ ರೇಣುಕಾ ಮಂಜುನಾಥ ಗುನಗಾ ಮೊದಲಾದವರಿದ್ದರು.
About The Author


More Stories
ಹಿರೇಗುತ್ತಿಯಲ್ಲಿ 14 ವಯೋಮಾನದ ಬಾಲಕ-ಬಾಲಕಿಯರ ಇಲಾಖಾ ಕ್ರೀಡಾಕೂಟ
ಎನ್. ರಾಮು ಹಿರೇಗುತ್ತಿಗೆ ಒಲಿದ ‘ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್’
ಸಂಪನ್ನಗೊಂಡ ಮಿರ್ಜಾನ್ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ