ಭಟ್ಕಳ: ಪುರವರ್ಗ ಮುಗಳಿ ಹೊಂಡದ ಹಾಡಿ ಜಾಗದಲ್ಲಿ ಆಕಳನ್ನು ಹತ್ಯೆ ಮಾಡಿದ ಪ್ರಕರಣದ ಸಂಬಂಧ ಅಪ್ರಾಪ್ತ ಸಹಿತ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಪ್ರಮುಖ ಆರೋಪಿಯನ್ನು ಫಹೀಮ್ ತಂದೆ ಮಹಮ್ಮದ ಆದಂ (38), ಪುರವರ್ಗ ಗಣೇಶನಗರ ನಿವಾಸಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿದ್ದ ಅಪ್ರಾಪ್ತ ಯುವಕನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಬಳಿಕ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದರು.

ಈ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆ ಪೊಲೀಸರು ಗೋಹತ್ಯೆ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಸಮಗ್ರ ತನಿಖೆಯ ನಂತರ ಮುಖ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಕಾರವಾರ ಉಪಕಾರಾಗೃಹಕ್ಕೆ ಸಾಗಿಸಲಾಗಿದೆ.
ಅಪ್ರಾಪ್ತ ಯುವಕನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.

More Stories
ಭಟ್ಕಳ ನ್ಯೂ ಇಂಗ್ಲಿಷ್ ಶಾಲೆ ಪೂರ್ವ ವಿದ್ಯಾರ್ಥಿಗಳ ಸಮಾಗಮ ಏ.29ರಂದು
ಮಣ್ಕುಳಿ ಪ್ರೀಮಿಯರ್ ಲೀಗ್–2026: ರಾಯಲ್ ಸಾಮ್ರಾಟ್ ಚಾಂಪಿಯನ್
ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು