ಭಟ್ಕಳ: ಕರ್ಣಾಟಕ ಬ್ಯಾಂಕ್ ಸಿ.ಎಸ್.ಆರ್. ಫಂಡ್‌ನಿಂದ ಇಲ್ಲಿನ ತಹಸೀಲ್ದಾರ್ ಭಟ್ಕಳ ಅವರ ಕಾರ್ಯಾಲಯಕ್ಕೆ ಎರಡು ಕಂಪ್ಯೂಟರ್ ಹಾಗೂ ಒಂದು ಝೆರಾಕ್ಸ್ ಮೆಶಿನ್‌ನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಪ್ರಾದೇಶಿಕ ಕಚೇರಿಯ ಉಪ ಮಹಾಪ್ರಬಂಧಕ ರಮೇಶ್ ವೈದ್ಯ ಅವರು, ಕರ್ಣಾಟಕ ಬ್ಯಾಂಕ್ ಸದಾ ತನ್ನ ಸಾಮಾಜಿಕ ಬದ್ಧತೆಯನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದು, ಸಿ.ಎಸ್.ಆರ್ ನಿಧಿಯ ಬಳಕೆಯಲ್ಲಿಯೂ ಸಮಾಜದ ಹಿತವನ್ನು ಮುಖ್ಯವಾಗಿಟ್ಟುಕೊಂಡಿದೆ ಎಂದರು. ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸಲು ತಹಸೀಲ್ದಾರ್ ಕಚೇರಿಯಲ್ಲಿ ಅಗತ್ಯವಿದ್ದ ಎರಡು ಕಂಪ್ಯೂಟರ್ ಮತ್ತು ಒಂದು ಝೆರಾಕ್ಸ್ ಮೆಶಿನ್‌ನ್ನು ನೀಡಲಾಗಿದೆ. ಜನಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ನಮ್ಮ ಬ್ಯಾಂಕ್, ಸಾರ್ವಜನಿಕರ ಅನುಕೂಲಕ್ಕಾಗಿ ಈ ಸೌಲಭ್ಯಗಳನ್ನು ಹಸ್ತಾಂತರಿಸಿದೆ ಎಂದು ತಿಳಿಸಿದರು.
ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಮಾತನಾಡಿ, ಕರ್ಣಾಟಕ ಬ್ಯಾಂಕ್‌ನ ಕೊಡುಗೆಯನ್ನು ಶ್ಲಾಘಿಸಿದರು. ಸಾರ್ವಜನಿಕರಿಗೆ ಶೀಘ್ರ ಮತ್ತು ಪರಿಣಾಮಕಾರಿ ಸೇವೆ ನೀಡಲು ಅನುಕೂಲವಾಗುವಂತೆ ಸಹಕರಿಸಿದ ಬ್ಯಾಂಕಿನ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕುಮಟ ವಲಯದ ಮುಖ್ಯ ಪ್ರಬಂಧಕ ರಂಜಿತ್ ಶೆಟ್ಟಿ, ಭಟ್ಕಳ ಶಾಖಾ ವ್ಯವಸ್ಥಾಪಕ ಸುನಿಲ್ ಪೈ, ಸಿಬ್ಬಂದಿ ನಂದನ ಎಂ. ಹಾಗೂ ತಹಸೀಲ್ದಾರ್ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

More Stories
ಭಟ್ಕಳ ನ್ಯೂ ಇಂಗ್ಲಿಷ್ ಶಾಲೆ ಪೂರ್ವ ವಿದ್ಯಾರ್ಥಿಗಳ ಸಮಾಗಮ ಏ.29ರಂದು
ಮಣ್ಕುಳಿ ಪ್ರೀಮಿಯರ್ ಲೀಗ್–2026: ರಾಯಲ್ ಸಾಮ್ರಾಟ್ ಚಾಂಪಿಯನ್
ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು