April 16, 2026

ಏಪ್ರಿಲ್ 6ರಂದು ಬರ್ಗಿಯಲ್ಲಿ ‘ಸಂಸ್ಕೃತೋತ್ಸವ – 2026’


ಕುಮಟಾ: ತಾಲೂಕಿನ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದ ವತಿಯಿಂದ ಏಪ್ರಿಲ್ 6ರಂದು ಸಂಜೆ 5 ಗಂಟೆಗೆ ಬರ್ಗಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ “ಬರ್ಗಿ ಸಂಸ್ಕೃತೋತ್ಸವ – 2026” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ, ಶಾಂತಾ ನಾರಾಯಣ ನಾಯಕ ಹಿರೇಗುತ್ತಿ, ಕರ್ನಾಟಕ ಸಂಸ್ಕೃತ ಪರಿಷತ್, ಡಾ. ಗಜಾನನ ನಾಯಕ ಅಭಿಮಾನಿ ಬಳಗ, ಬರ್ಗಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ, ತೊರ್ಕೆಯ ಆನಂದ ಕವರಿ ಪ್ರತಿಷ್ಠಾನ, ಕರ್ನಾಟಕ ರಣಧೀರರ ವೇದಿಕೆಯ ಕುಮಟಾ ಘಟಕ ಹಾಗೂ ಬೇಲೇಕೇರಿಯ ಸುಮಾ ಹರೀಶ ಅವರ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.


ಪ್ರತಿ ವರ್ಷದಂತೆ ಈ ವರ್ಷವೂ ಸಂಸ್ಕೃತವನ್ನು ಆಯ್ದು ವ್ಯಾಸಂಗ ಮಾಡುತ್ತಿರುವ ಹಾಗೂ ಮುಂದುವರಿಸುತ್ತಿರುವ ವಿದ್ಯಾರ್ಥಿಗಳಿಗೆ “ಸಂಸ್ಕೃತ ಪ್ರದೀಪ ಪುರಸ್ಕಾರ” ಪ್ರದಾನ ಮಾಡಲಾಗುವುದು. ಈ ಪುರಸ್ಕಾರದಲ್ಲಿ ನಗದು, ಪೇಟ, ಹಾರ, ಶಾಲು, ಫಲಕ, ಪ್ರಮಾಣಪತ್ರ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ.
ಇದೇ ಸಂದರ್ಭದಲ್ಲಿ ತುಮಕೂರಿನ ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ತಿನ “ವಿವೇಕ ವಿದ್ಯಾರ್ಥಿ ಪರೀಕ್ಷೆ”, ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನದ “ರಾಮಾಯಣ ಪರೀಕ್ಷೆ” ಹಾಗೂ ಕುಮಟಾ ಡಯಟ್ ವತಿಯಿಂದ ನಡೆದ “ವಿವೇಕಾಮುಖಿ” ಕಾರ್ಯಕ್ರಮದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.
ಅದೇ ರೀತಿ ಹತ್ತು ಗಣ್ಯ ಸಾಧಕರಿಗೂ ಸನ್ಮಾನ ನಡೆಯಲಿದೆ. ಇವರಲ್ಲಿ ವಿಶ್ರಾಂತ ಅಧ್ಯಾಪಕರಾದ ಮೋಹನ ಭಂಡಾರಿ, ಗಾಯತ್ರಿ ಗೌಡ, ವಿ.ಡಿ. ನಾಯಕ ವಂದಿಗೆ, ರಾಜಂ ಹಿಚ್ಕಡ್, ಯುವ ಸಾಧಕಿ ಆರಾಧ್ಯ ತಿಮ್ಮಣ್ಣ ನಾಯಕ್, ನಿವೃತ್ತ ಅಧೀಕ್ಷಕ ಟಾಕೀಶ್ ಪಟಗಾರ, ಶಿಕ್ಷಣ ಚಿಂತಕ ಎಂ.ಜಿ. ಭಟ್, ಪತ್ರಕರ್ತ ಜಿ.ಡಿ. ಶಾನಭಾಗ್, ಸದಾಶಿವ ನಾಯ್ಕ ಹಾಗೂ ಮಹಾದೇವ ನಾಯ್ಕ ಸೇರಿದಂತೆ ಹಲವರು ಸೇರಿದ್ದಾರೆ.


ಸಂಸ್ಕೃತಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.

About The Author

error: Content is protected !!