ಕಾರ್ಕಳ: ನಮ್ಮ ಪರಿಸರದ ಮಣ್ಣಿನ ಸಾರವನ್ನು ಅರ್ಥೈಸುವುದರ ಜೊತೆಗೆ ಸಂಸ್ಕೃತಿಯ ಪ್ರತೀಕಗಳನ್ನು ಬಿಂಬಿಸುವ “ನಮನ” ಚಿತ್ರಕಲಾ ಪ್ರದರ್ಶನವು ಏಪ್ರಿಲ್ 10ರಂದು ಸಂಜೆ 4 ಗಂಟೆಗೆ ಬೈಲೂರಿನ ತ್ರಿವರ್ಣ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಸಂಚಾಲಕ ಸುರೇಶ್ ಶೆಟ್ಟಿ ಸಾಯಿರಾಮ್ ತಿಳಿಸಿದರು.
ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆಯ್ದ 30 ವಿದ್ಯಾರ್ಥಿಗಳಿಂದ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಯಕ್ಷಗಾನ ಮೇಳಗಳ ಸಂಚಾಲಕರಾದ ಶ್ರೀಪಿ ಕಿಶನ್ ಹೆಗ್ಡೆ, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಕುಮಾರ್ ಗುತ್ತು ಮನೆ, ಕನಂಜಾರು ಲೂರ್ಡ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲೆ ಜಾಸ್ಮಿನ್ ಪಿಂಟೋ, ಉದ್ಯಮಿ ರಮೇಶ್ ಕಿಣಿ, ಉದಯಕುಮಾರ್ ಹೆಗಡೆ ಏರ್ಲಪಾಡಿ ಹಾಗೂ ಕಾರ್ಕಳ ತಾಲೂಕು ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಶಾಕೀರ ಹುಸೇನ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.
ಮಾರ್ಗದರ್ಶಕ ಹಾಗೂ ಕಲಾವಿದ ಹರೀಶ್ ಸಾಗ ಮಾತನಾಡಿ, ಪಂಚಗಂಗಾವಳಿ, ಮೀನುಗಾರರು, ಕೋಟಿಲಿಂಗೇಶ್ವರ, ಅನಂತಶಯನ, ಸಿದ್ದಿ ವಿನಾಯಕ, ಬೇಸಾಯ, ಟೀ ಎಸ್ಟೇಟ್, ಕಂತಾರ, ಸಮುದ್ರ, ಹುಲಿ ವೇಷ, ಬ್ರಹ್ಮಲಿಂಗೇಶ್ವರ, ಕಂಬಳ, ಬಸದಿ, ಕಟ್ಟೆ ಪೂಜೆ, ಬಲಿಕೋಟೆ, ಆಂಜನೇಯ ಜಾತ್ರೆ, ಗೊಂಬೆ ಆಟ, ಬಾಹುಬಲಿ, ಕೋಳಿ ಅಂಕ, ನಂದಾದೀಪ, ಆನೆಕೆರೆ, ರಥ ಬೀದಿ, ದೇವಸ್ಥಾನ ಮತ್ತು ಡೊಳ್ಳು ಕುಣಿತ ಸೇರಿದಂತೆ ಒಟ್ಟು 33 ಚರ್ಕೋಲ್ ಮಿಶ್ರಮಾಧ್ಯಮದ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂದೇಶ್ ಶೆಟ್ಟಿ, ಸುನೀತಾ ದಿನೇಶ್ ಶೆಟ್ಟಿ ಹಾಗೂ ಶಾಲಿನಿ ಸುರೇಶ್ ಉಪಸ್ಥಿತರಿದ್ದರು.
ವರದಿ : ಅರುಣ ಭಟ್ ಕಾರ್ಕಳ

More Stories
ಕಾರ್ಕಳದಲ್ಲಿ 2027ರ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಾಭಿಷೇಕ: ಭವ್ಯ ಸಿದ್ಧತೆಗಳಿಗೆ ಚಾಲನೆ
ಗುಡ್ಡೆ ಗುಳಿಗ ದೈವಸ್ಥಾನದಲ್ಲಿ ಪೊಲೀಸ್ ಇಲಾಖೆಯಿಂದ ಹರಕೆಯ ಗಗ್ಗರ ಸೇವೆ
ರಾಜ್ಯ ಸರ್ಕಾರದ ನಡೆ ಖಂಡನೀಯ: ನವೀನ್ ನಾಯಕ್ ಆಕ್ರೋಶ