April 16, 2026

ಗುಡ್ಡೆ ಗುಳಿಗ ದೈವಸ್ಥಾನದಲ್ಲಿ ಪೊಲೀಸ್ ಇಲಾಖೆಯಿಂದ ಹರಕೆಯ ಗಗ್ಗರ ಸೇವೆ


ಕಾರ್ಕಳ: ತಾಲೂಕಿನ ಗುಡ್ಡೆ ಗುಳಿಗ ದೈವಸ್ಥಾನದಲ್ಲಿ ಏಪ್ರಿಲ್ 7, 2026ರಂದು ಮಂಗಳವಾರ ಕಾರ್ಕಳ ನಗರ ಪೊಲೀಸ್ ಠಾಣೆ ಹಾಗೂ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ರಾತ್ರಿ 8.30ರಿಂದ ಹರಕೆಯ ಗಗ್ಗರ ಸೇವೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.


ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಡಿವೈಎಸ್ಪಿ ವಿಜಯ್ ಪ್ರಸಾದ್, ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ ಡಿ.ಆರ್., ಟೌನ್ ಪಿಎಸ್‌ಐ ಮುರಳೀಧರ ನಾಯ್ಕ್, ಶಿವಕುಮಾರ್, ರೂರಲ್ ಪಿಎಸ್‌ಐ ಪ್ರಸನ್ನ, ಸುಂದರ ಸೇರಿದಂತೆ ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿ ದೈವದ ಹರಕೆಯ ನೇಮೋತ್ಸವದಲ್ಲಿ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು.


ಇದೇ ಸಂದರ್ಭದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಭೇಟಿ ನೀಡಿ ದೈವಗಳ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸಿದರು. ಅನೇಕ ಭಕ್ತಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾದರು.
ಕಾರ್ಯಕ್ರಮ ಭಕ್ತಿಭಾವ ಹಾಗೂ ಸಾಂಪ್ರದಾಯಿಕ ವೈಭವದಿಂದ ನೆರವೇರಿತು.
ವರದಿ: ಅರುಣ್ ಭಟ್, ಕಾರ್ಕಳ

About The Author

error: Content is protected !!