ಭಟ್ಕಳ– ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಷ್ಠ ಬಂಧ ಬ್ರಹ್ಮ ಕಲಶೋತ್ಸವ ಕನೆಯ ದಿನ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಜಗದೀಶ್ ಪುತ್ತೂರು ಅವರ ಭಕ್ತಿ ಸಂಗೀತ ಆಯೋಜಿಸಲಾಗಿತ್ತು.
ರಾತ್ರಿ ಒಂಬತ್ತು ಗಂಟೆಯಿಂದ ತಡರಾತ್ರಿ ಹನ್ನೆರಡು ಗಂಟೆವರೆಗೂ ನಡೆದ ಭಕ್ತಿ ಸಂಗೀತ ಕಾರ್ಯಕ್ರಮ ದಲ್ಲಿ ಜಗದೀಶ್ ಪುತ್ತೂರು ಹಾಗೂ ಬಳಗದವರು ಗಣೇಶ ಸ್ತುತಿ, ಶಿವ,ಸ್ತುತಿ, ತಿರುಪತಿ ವೆಂಕಟರಮಣ ಭಕ್ತಿ ಗೀತೆ ಹಾಗೂ ದುರ್ಗಾಪರಮೇಶ್ವರಿ ಅಮ್ಮನವರ ಹಾಡುಗಳು ಅದ್ಬುತ ವಾಗಿ ಒಂದಕ್ಕಿಂತ ಒಂದು ಹೆಚ್ಚು ಎನ್ನುವಂತೆ ಮೂಡಿ ಬಂದವು. ಸಹ ಗಾಯಕಿಯರು ಸಹ ಅಷ್ಟೇ ಮಧುರವಾಗಿ ಹಾಡಿ ಎಲ್ಲರ ಗಮನ ಸೆಳೆದರು. ಭಕ್ತಿ ಸಂಗೀತ ಕ್ಕೆ ಅತ್ಯಂತ ಮೆರಗು ತಂದಿದ್ದು ಕೃಷ್ಣ ಪ್ರಸಾದ್ ಮಂಗಳೂರುರವರ ನಿರೂಪಣೆ. ಹಾಗೂ ಬೆಳಕೆಯ ಕುಣಿತ ಭಜನಾ ತಂಡದ ಆಕರ್ಷಕ ಕುಣಿತ. ಊರು ಪರೂರಿನ ಗಾಯನ ಪ್ರಿಯರ ಕಕ್ಕಿರಿದ ಜನದಟ್ಟಣೆಯ ನಡುವೆ ಕಾರ್ಯಕ್ರಮ ಅದ್ಭುತ ವಾಗಿ ಮೂಡಿಬಂದವು. ಕೊನೆಯಲ್ಲಿ ಹಾಡಿದ ಹರಿವರಾಸಂ ಹಾಡು ಭಕ್ತಿಯಲ್ಲಿ ಎಲ್ಲರನ್ನೂ ತೇಲಿಸುವಂತಿತ್ತು.
ದೇವಸ್ಥಾನ ವತಿಯಿಂದ ಅಧ್ಯಕ್ಷರಾದ ಎಸ್ ಬಿ ಬೊಮ್ಮಾಯಿ ಕಲಾವಿದರನ್ನು ಗೌರವಿಸಿದರು. ಈ ಸಂಧರ್ಭದಲ್ಲಿ ದೇವಸ್ಥಾನ ದ ಉಪಾಧ್ಯಕ್ಷ ವಿಜಯ ಮೊಗೇರ, ಕಾರ್ಯದರ್ಶಿ ಸುಕ್ರಯ್ಯ ದೇವಾಡಿಗ ,ದೀಪಕ ನಾಯ್ಕ,ಕೃಷ್ಣಪ್ಪ ನಾಯ್ಕ ಗಾಯಕ ಉಮೇಶ ಮುಂಡಳ್ಳಿ, ಮಂಜುನಾಥ ನಾಯ್ಕ,ನಾಗಪ್ಪಯ್ಯ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.



More Stories
ತೇಜಸ್ವಿ ನಾಯ್ಕರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ
ಬೈಲೂರಿನಲ್ಲಿ ಭಗವದ್ಗೀತೆಯ 3ನೇ ಅಧ್ಯಾಯ ಸಮರ್ಪಣೆ, ಮಾತೃವಂದನೆ ಕಾರ್ಯಕ್ರಮ ಯಶಸ್ವಿ
ಮೊಬೈಲ್ ಮೋಜಿನಿಂದ ಮಕ್ಕಳನ್ನು ಹೊರತರುವ ಅಗತ್ಯವಿದೆ : ರಾಮದಾಸ ಪ್ರಭು