ಕಾರ್ಕಳ : ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಕಾರ್ಕಳದ ಆಯುಷ್ ಶೆಟ್ಟಿ ಯವರನ್ನು ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಇಂದು ವಿಧಾನಸೌಧದ ಕಚೇರಿಯಲ್ಲಿ ಅಭಿನಂದಿಸಿ ಶಾಲು ಹಾಕಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿಜಯಕುಮಾರ್ ಸೊರಕೆ, ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ, ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜು, ಆಯುಶ್ ಶೆಟ್ಟಿಯವರ ತಂದೆ ರಾಮ ಪ್ರಕಾಶ್ ಶೆಟ್ಟಿ, ತಾಯಿ ಶ್ರೀಮತಿ ಶಾಲ್ಮಲಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಆಯುಶ್ ಶೆಟ್ಟಿಯವರು ಚೀನಾದ ನಿಂಗ್ಬೋ, ದಲ್ಲಿ ನಡೆದ ಪಂದ್ಯಾಟದಲ್ಲಿ ವಿಶ್ವದ ನಂ. 1 ಆಟಗಾರ ಕುನ್ಲಾವುತ್ ವಿಟಿಡ್ಸರ್ನ್ ಅವರನ್ನು ಭರ್ಜರಿಯಾಗಿ ಸೋಲಿಸಿ ಪೈನಲ್ ಪ್ರವೇಶಗೈದು 61 ವರ್ಷದ ಬಳಿಕ ಭಾರತಕ್ಕೆ ಬೆಳ್ಳಿ ಪದಕದ ಸಾಧನೆ ಮಾಡಿದ್ದರು.
ವರದಿ : ಅರುಣ ಭಟ್ ಕಾರ್ಕಳ

About The Author


More Stories
ಮೊದಲ ಅಕ್ಷರ ಪಾಠ ಕಲಿಸಿದ ಶಿಕ್ಷಕಿಗೆ ಗೌರವಾರ್ಪಣೆ: ಶುಭದರಾವ್ ಅವರಿಂದ ಗುರುಭಕ್ತಿ
ಮುನಿಯಾಲಿನಲ್ಲಿ ಸಹಸ್ರ ಶ್ರೀಕೃಷ್ಣ ನಾಮ ತುಳಸಿ ದಳ ಅರ್ಚನೆ
ವಿಶ್ವ ಕ್ರೀಡಾ ದಿನಾಚರಣೆ