April 16, 2026

ಎಐಟಿಎಂನಲ್ಲಿ ವಿಟಿಯು ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿ ಚಾಲನೆ


ಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ (ಎಐಟಿಎಂ)ನಲ್ಲಿ ವಿಟಿಯು ಅಂತರ ಕಾಲೇಜು ಮಂಗಳೂರು ವಿಭಾಗದ ಪುರುಷರ ಫುಟ್ಬಾಲ್ ಪಂದ್ಯಾವಳಿ ಗುರುವಾರ ಭರ್ಜರಿಯಾಗಿ ಉದ್ಘಾಟನೆಗೊಂಡಿತು.

ಎಪ್ರಿಲ್ 16 ಮತ್ತು 17ರಂದು ನಡೆಯಲಿರುವ ಈ ಪಂದ್ಯಾವಳಿಗೆ ಎಐಟಿಎಂ ಪ್ರಾಂಶುಪಾಲ ಡಾ. ಕೆ. ಫಝಲುರ್ ರೆಹಮಾನ್ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣದಲ್ಲಿ ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿ ಉತ್ತರ ಕನ್ನಡ ಜಿಲ್ಲಾ ಫುಟ್ಬಾಲ್ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಭಟ್ಕಳ ಅಂತರ ಕಾಲೇಜು ಸಂಘದ ಸಂಸ್ಥಾಪಕ ಮಾವಿಯಾ ಮೊಹ್ತಿಶಮ್ ಮಾತನಾಡಿ, ಕ್ರೀಡಾಸ್ಪೂರ್ತಿ, ಶಿಸ್ತು ಮತ್ತು ತಂಡಭಾವನೆ ಸ್ಪರ್ಧಿಗಳಲ್ಲಿ ಅನಿವಾರ್ಯ ಎಂದು ತಿಳಿಸಿದರು.
ಎಐಟಿಎಂ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರ್ ದಮ್ದಾಬು ಹಾಗೂ ಅಂಜುಮನ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಶಾಕ್ ಶಾಬಂದ್ರಿ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಕ್ರೀಡೆಗೂ ಸಮಾನ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಅಂಜುಮನ್ ಹಮಿ-ಎ-ಮುಸ್ಲಿಮೀನ್ (ಎಎಚ್‌ಎಂ) ಪ್ರಧಾನ ಕಾರ್ಯದರ್ಶಿ ಪಂದ್ಯಾವಳಿಯನ್ನು ಅಧಿಕೃತವಾಗಿ ಉದ್ಘಾಟಿಸಿದರು.
ಪ್ರೊ. ಶ್ರೀಶೈಲ್ ಭಟ್ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರುರಿ, ದೈಹಿಕ ಶಿಕ್ಷಣ ನಿರ್ದೇಶಕ ಭಾಸ್ಕರ್ ಬೆಳೆಗದ್ದೆ ಸೇರಿದಂತೆ ಅಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

error: Content is protected !!