ಭಟ್ಕಳ: ಶ್ರೀ ಸಂಸ್ಥಾನ ರಾಮಚಂದ್ರಾಪುರ ಮಠದ ಸ್ವರ್ಣ ಪಾದುಕಾ ಸಂಚಾರ ಭಟ್ಕಳ ವಲಯದ ಮುರ್ಡೇಶ್ವರ ಭಾಗದಲ್ಲಿ ಭಕ್ತಿಭಾವದಿಂದ ನೆರವೇರಿತು.
ಹೊನ್ನಾವರ ವಲಯದಿಂದ ಭಟ್ಕಳ ವಲಯಕ್ಕೆ ಆಗಮಿಸಿದ ಸ್ವರ್ಣ ಪಾದುಕೆಯನ್ನು ಮುರ್ಡೇಶ್ವರದ ಗೋಪಾಲ ಹೆಗಡೆ ಅವರ ಮನೆಯಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಧೂಳೀ ಪೂಜೆಯ ಮೂಲಕ ಪಾದುಕೆಯನ್ನು ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು. ನಂತರದ ದಿನ ಗೋಪಾಲ ಹೆಗಡೆ ಹಾಗೂ ಶೈಲಾ ಹೆಗಡೆ ದಂಪತಿಗಳು ಸ್ವರ್ಣ ಭಿಕ್ಷಾ ಸೇವೆಯನ್ನು ನೆರವೇರಿಸಿದರು.
ಮುರ್ಡೇಶ್ವರದಲ್ಲಿ ಶಂಭು ನಾರಾಯಣ ಹೆಗಡೆ, ಎಂ.ವಿ. ಹೆಗಡೆ, ಗಣೇಶ ಭಟ್ಟ ಕೊರ್ಲಿಕಾನ್, ಮಹಾಬಲೇಶ್ವರ ಈಶ್ವರ ಭಟ್ಟ, ದೇನು ಆತಿಥ್ಯ, ರಾಧಾ ಹೆಗಡೆ, ಡಾ. ಐ.ಆರ್. ಭಟ್ಟ, ಗಣೇಶ ಜನಾರ್ಧನ ಭಟ್ಟ, ಗಜಾನನ ಭಟ್ಟ, ಶಾಲಿನಿ ಭಟ್ಟ, ಆರ್.ಎಂ. ಹೆಗಡೆ ಸೇರಿದಂತೆ ಹಲವರ ಮನೆಯಲ್ಲಿ ಪೂಜೆ ಸ್ವೀಕರಿಸಿದ ಸ್ವರ್ಣ ಪಾದುಕೆಯನ್ನು ಬಳಿಕ ಭವತಾರಿಣಿ ವಲಯಕ್ಕೆ ವಿಧಿವಿಧಾನಗಳೊಂದಿಗೆ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಭಟ್ಕಳ ಹವ್ಯಕ ವಲಯದ ಅಧ್ಯಕ್ಷ ಎಂ.ವಿ. ಹೆಗಡೆ, ಉಪಾಧ್ಯಕ್ಷ ರಾಧಾಕೃಷ್ಣ ಭಟ್ಟ, ಕಾರ್ಯದರ್ಶಿ ಶ್ರೀಧರ ಎಸ್.ಎಂ. ಭಟ್ಟ, ಮಂಡಳದ ಉಪಾಧ್ಯಕ್ಷ ಶಂಭು ಹೆಗಡೆ, ಮಾತೃ ಪ್ರಧಾನೆಯರಾದ ರೇಷ್ಮಾ ಭಟ್ಟ, ಮಂಗಲಾ ಉಪಾಧ್ಯಾಯ, ವಿದ್ವಾನ್ ನೀಲಕಂಠ ಯಾಜಿ, ಭಾಲಕೃಷ್ಣ ಸೀತಾರಾಮ ಶಾಸ್ತ್ರಿ, ಪ್ರಕಾಶ ಭಟ್ಟ, ಪಿ.ಎನ್. ಭಟ್ಟ, ಗುರುಕಾರರಾದ ಅನಂತ ಭಟ್ಟ, ವೆಂಕಟ್ರಮಣ ಹೆಗಡೆ, ಮಂಜುನಾಥ ವಿ. ಭಟ್ಟ, ತಿಮ್ಮಣ್ಣ ಮಧ್ಯಸ್ಥ, ವಿಶ್ವನಾಥ ಭಟ್ಟ, ನಾರಾಯಣ ಫರಂ ಭಟ್ಟ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.

About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ