

ಕಾರ್ಕಳ ಸುದ್ದಿ
ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಐದು ದಿನಗಳ ಭವ್ಯ ಉತ್ಸವ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಪಡುತಿರುಪತಿ ಖ್ಯಾತಿಗೆ ಪಾತ್ರವಾಗಿರುವ ಈ ದೇವಸ್ಥಾನದಲ್ಲಿ ನಡೆದ ಉತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಮನಸೆಳೆಯುವಂತೆ ಜರುಗಿದವು.

ಉತ್ಸವದ ಅಂಗವಾಗಿ ಬಲಿ, ಕಟ್ಟೆ ಪೂಜೆ, ಮೃಗಬೇಟೆ ಉತ್ಸವ, ಮಹಾ ರಥೋತ್ಸವ ಹಾಗೂ ಅವಭೃತ ಓಕುಳಿ ಉತ್ಸವಗಳು ಭಕ್ತಿಭಾವದಿಂದ ನಡೆದವು. ಈ ಸಂದರ್ಭದಲ್ಲಿ ಜಿ.ಎಸ್.ಬಿ ಬಂಧುಗಳು ಸೇರಿದಂತೆ ಊರ-ಪರ ಊರಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವರ ದರ್ಶನ ಪಡೆದರು.

ಐದು ದಿನಗಳ ಕಾಲ ನಿರಂತರ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿ ಧನ್ಯರಾದರು. ಉತ್ಸವದ ಸಂಪೂರ್ಣ ಅವಧಿಯಲ್ಲಿ ದೇವಸ್ಥಾನ ಪರಿಸರದಲ್ಲಿ ಭಕ್ತಿಭಾವ ಮತ್ತು ಹಬ್ಬದ ಸಂಭ್ರಮ ಆವರಿಸಿತ್ತು.
ವರದಿ: ಅರುಣ್ ಭಟ್, ಕಾರ್ಕಳ

About The Author




More Stories
ಅಧಿಕಾರಿಗಳು ಬುದ್ಧಿವಂತಿಕೆಯಿಂದ ಮಾತ್ರವಲ್ಲ, ಹೃದಯವಂತಿಕೆಯಿಂದಲೂ ಕೆಲಸ ಮಾಡಲಿ: ಸಚಿವ ಯು.ಟಿ. ಖಾದರ್
ಕಾರ್ಕಳದಲ್ಲಿ ರಸ್ತೆ ದುಸ್ಥಿತಿ ವಿರುದ್ಧ ಕಾಂಗ್ರೆಸ್ನ 20 ಕಿ.ಮೀ. ಬೃಹತ್ ಜಾಥಾ! ಬಿಜೆಪಿ ವಿರುದ್ಧ ಆಕ್ರೋಶ
ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದಲ್ಲಿ ವೈಭವದ ಜಾತ್ರಾ ಮಹೋತ್ಸವ – ವ್ಯಾಘ್ರ ಚಾಮುಂಡಿ ದೈವದ ಭಂಡಾರ ಮೆರವಣಿಗೆ