ಹೊನ್ನಾವರ : ಪಟ್ಟಣದ ನಾಮಧಾರಿ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ರಾಣಿ ಚೈನ್ನಭೈರಾದೇವಿ ಕಾಲದಿಂದಲೂ ಕಾಸರಕೋಡ ದೇವರಮೊಟೆ, ಕಳಸಿನಮೊಟೆ ತನ್ನದೆ ಪುರಾಣ ಹಿನ್ನಲೆ ಹೊಂದಿರುವ ಪ್ರದೇಶವಾಗಿದೆ. ಇಂತಹ ಪ್ರದೇಶದಲ್ಲಿ ಸಾರ್ವಜನಿಕರೆಲ್ಲರೂ ಸೇರಿ ಶ್ರೀನಿವಾಸ ಕಲ್ಯಾಣ ಆಯೋಜಿಸುತ್ತಿದ್ದು, ಸಾರ್ವಜನಿಕರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಿ ಎಂದು ಸಮಿತಿಯ ಅಧ್ಯಕ್ಷರು ಯಜಮಾನ ಆಟೋಮಿಷನ್ ಟೆಕ್ನಾಲಜಿಸ ರಾಮಚಂದ್ರ ಗೌಡ ವಿನಂತಿ ಮಾಡಿಕೊಂಡಿದ್ದಾರೆ.

ನ್ಯಾಯವಾದಿ ವಿಕ್ರಮ ನಾಯ್ಕ ಮಾತನಾಡಿ ರಾಮಚಂದ್ರ ಗೌಡರು ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲದೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಕಳಸಿನಮೋಟೆ ಊರಿನ ಜನರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಆದಿಚುಂಚನಗಿರಿ ಮಿರ್ಜಾನ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಬ್ರಹ್ಮಶ್ರೀ ನಾರಾಯಣ ಗುರು ದತ್ತ ಪೀಠ ಕಲಬುರ್ಗಿಯ ಡಾ. ಪ್ರಣವಾನಂದ ಸ್ವಾಮೀಜಿ, ನೀಲಗೋಡ ಯಕ್ಷ ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ಮಾದೇವ ಸ್ವಾಮಿ ಸೀಮಾ ಮುಖ್ಯಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕ ಸೂರಾಲು ಚಂದ್ರಶೇಖರ ಭಟ್ಟರವರು ಸಾನಿಧ್ಯ ವಹಿಸಲಿದ್ದಾರೆ ಎಂದರು..
ಕರವೇ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ ಇಂದು ಯಾವುದೇ ಕಾರ್ಯಕ್ರಮ ಮಾಡಿದರು ಅವರ ಫೋಟೋ ಹಾಕಿ ಬ್ಯಾನರ್ ಅಳವಡಿಸುವರು ಹೆಚ್ಚಿದ್ದಾರೆ. ಸ್ವಂತ ಖರ್ಚು ಮಾಡಿ ಕಾರ್ಯಕ್ರಮ ಮಾಡುತ್ತಿರುವ ರಾಮಚಂದ್ರ ಗೌಡರು ಯಾವುದೇ ಪ್ರಚಾರ ಬಯಸುತ್ತಿಲ್ಲ. ತಾವು ಮಾಡಿದ ಕಾರ್ಯಕ್ರಮ ಇಡಿ ಊರಿಗೆ, ಸಮಾಜಕ್ಕೆ ಅರ್ಪಣೆ ಆಗಬೇಕು. ದೇವರ ಕೃಪೆ ಎಲ್ಲರು ಮೇಲು ಕೃಪಾಶೀರ್ವಾದ ಆಗಬೇಕು ಎಂದು ಹುಟ್ಟೂರಿನಲ್ಲಿ ಜಾತ್ಯತೀತ, ಧರ್ಮತೀತವಾದ ಪುಣ್ಯದ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ನಾಗರಾಜ ಗೌಡ ಮಾತನಾಡಿ ಶ್ರೀನಿವಾಸ ಕಲ್ಯಾಣೋತ್ಸವದ ಆಚರಣೆ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಯುವಕ ಯುವಕರ ವಿವಾಹದ ಉದ್ದೇಶ ಇಟ್ಟುಕೊಂಡು ಮದುವೆ ದಿಬ್ಬಣ ವಧು ವರರ ವೇದಿಕೆ ಆನ್ಲೈನ್ ರಜಿಸ್ಟ್ರೇಶನ್ ಪ್ಲಾಟ್ ಫಾರ್ಮ್ ಲೋಕಾರ್ಪಣೆಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ವಿ. ಡಿ. ನಾಯ್ಕ, ಉಮೇಶ ಮೇಸ್ತ, ಅಣ್ಣಪ್ಪ ಗೌಡ, ಶಿಕ್ಷಕ ರಾಘವೇಂದ್ರ ಗೌಡ ನಾರಾಯಣ ನಾಯ್ಕ ಇದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author


More Stories
“ನೇತ್ರದಾನ ಶ್ರೇಷ್ಠ ದಾನ” – ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ
ಪರಿಸರ ಸೂಕ್ಷ್ಮ ವಲಯ (ESZ) ಅಧಿಸೂಚನೆ ವಿರೋಧಿಸಿ ಕೇಂದ್ರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಕರೆ
ಸರ್ವೇ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ರಾಮಚಂದ್ರ ಎನ್. ಶೆಟ್ಟಿ ನಿಧನ