May 24, 2026

ಕುಮಟಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಸ್ಕೃತ, ಡಾ. ಅರವಿಂದ ಶ್ಯಾನಭಾಗ, ಬಾಳೇರಿಯವರ ಆಗ್ರಹಕ್ಕೆ ಇಲಾಖೆಯ ಸ್ಪಂದನೆ

ಕುಮಟಾ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಸ್ಕೃತ ವಿಷಯದ ಬೋಧನೆಗೆ ಅನುಮತಿಯನ್ನು ನೀಡುವ ಕುರಿತಂತೆ ಸಂಸ್ಕೃತ ಪ್ರಾಧ್ಯಾಪಕರು, ಸಂಶೋಧಕರು, ಸಾಮಾಜಿಕ ಚಿಂತಕರಾದ ಡಾ. ಅರವಿಂದ ಶ್ಯಾನಭಾಗ ಬಾಳೇರಿಯವರ ಒತ್ತಾಸೆಗೆ ಸ್ಪಂದಿಸಿದ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಕಾಲೇಜಿನ ಪ್ರಾಚಾರ್ಯರು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಪ್ರೌಢಶಾಲೆ ಮತ್ತು ಪದವಿಪೂರ್ವ ತರಗತಿಗಳಲ್ಲಿ ಕುಮಟಾದ ಸುತ್ತಣದ ಪರಿಸರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಂಸ್ಕೃತವನ್ನು ಅಭ್ಯಸಿಸಿ, ಮುಂದೆ ಪದವಿ ಹಂತದಲ್ಲಿ ಸಂಸ್ಕೃತವನ್ನು ಕಲಿಯಲು ಇದುವರೆಗೆ ಸ್ಥಳೀಯ ಸರ್ಕಾರಿ ಕಾಲೇಜಿನಲ್ಲಿ ಅವಕಾಶವು ಇಲ್ಲದಿರುವುದರಿಂದ, ವಿದ್ಯಾರ್ಥಿಗಳು ಸಂಸ್ಕೃತ ಕಲಿಕೆಯಿಂದ ವಂಚಿತರಾಗುತ್ತಿರುವುದನ್ನು ಮನಗಂಡ ಡಾ. ಅರವಿಂದ ಶ್ಯಾನಭಾಗರು, ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಸಂಸ್ಕೃತ ಕಲಿಕೆಗೆ ಅವಕಾಶವನ್ನು ಕೊಡಬೇಕೆಂದು ಉನ್ನತ ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದ್ದರು.

ಕುಮಟಾದಲ್ಲಿ ಉನ್ನತ ಶಿಕ್ಷಣದ ಹಂತದಲ್ಲಿ ಸಂಸ್ಕೃತ ಕಲಿಕೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಡಾ. ಅರವಿಂದ ಶ್ಯಾನಭಾಗರ ಕಳಕಳಿಯನ್ನು ಕರ್ನಾಟಕ ಸಂಸ್ಕೃತ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವ್ಕರ್ ಬರ್ಗಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಗಣೇಶ್ ಭಟ್ ರವರು ಮುಕ್ತ ಕಂಠದಿAದ ಶ್ಲಾಘಿಸಿದ್ದಾರೆ.

About The Author

error: Content is protected !!