June 11, 2026

ಕ್ಷಯ ರೋಗವು ಶ್ವಾಸಕೋಶವನ್ನು ಬಾಧಿಸುತ್ತದೆ. – ಡಾ. ಸೌಮ್ಯಾ

ಶಿರಸಿ ; ಕ್ಷಯ ರೋಗವು ಶ್ವಾಸಕೋಶವನ್ನು ಬಾಧಿಸುತ್ತದೆ. ಎ ಐ ತಂತ್ರಜ್ಞಾನದ ಮೊಬೈಲ್ ಹ್ಯಾಂಡಲ್ ಎಕ್ಸ್ ರೆಯು ಕ್ಷಯ ಹಾಗೂ ಇನ್ನಿತರ ತೊಂದರೆಗಳನ್ನು ಪತ್ತೆ ಹಚ್ಚುವಲ್ಲಿ ಅತ್ಯಂತ ಪರಿಣಾಮಕಾರಿಯಾದದ್ದು ಎಂದು ಸಿರಸಿಯ ಬಿಸಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ
ವೈದ್ಯಾಧಿಕಾರಿಗಳಾದ ಡಾ. ಸೌಮ್ಯಾ ರವರು ಅಭಿಪ್ರಾಯಪಟ್ಟರು. ಅವರು ಬಿಸಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ *ಕ್ಷಯ ರೋಗ ಅರಿವು ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಹಿರಿಯ ಕ್ಷಯರೋಗ ಮೇಲ್ವಿಚಾರಕ ಉದಯಶಂಕರ ರವರು ಮಾತನಾಡಿ ಕ್ಷಯ ರೋಗದ ಬಗ್ಗೆ ಜಾಣರಾಗಿರಿ, ಜಾಗರೂಕರಾಗಿರಿ, ಧೈರ್ಯದಿಂದ ಎದುರಿಸಿದಾಗ ರೋಗವನ್ನು ಓಡಿಸಬಹುದು ಎಂದು ತಿಳಿಸಿದರು.
ದೇಶಾದ್ಯಂತ ನೂರು ದಿನಗಳ ಕ್ಷಯ ಅಭಿಯಾನ ಕಾರ್ಯಕ್ರಮ ಪ್ರಾರಂಭಗೊಂಡಿದ್ದು ರೋಗ ನಿರ್ನಾಮ ಮಾಡಲು ಈಗ ಸಕಾಲವಾಗಿದೆ ಎಂದರು.


ಕಾರ್ಯಕ್ರಮದ ನಂತರ ವೈದ್ಯಾಧಿಕಾರಿಗಳಾದ ಡಾ. ಸೌಮ್ಯಾ ರವರು ಆರೋಗ್ಯ ತಪಾಸಣೆ ನಡೆಸಿದರೆ, ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ ಲಕ್ಷ್ಮಣ ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಆಂಜನೇಯ ರವರು ಕ್ಷಕಿರಣ ತಪಾಸಣೆ ನಡೆಸಿದರು, ಸಮುದಾಯ ಆರೋಗ್ಯ ಅಧಿಕಾರಿ ಕುಮಾರಿ ಜೀವಿತಾ ನಾಯ್ಕ್ ಹಾಗೂ ಶುಶ್ರೂಷಣಾಧಿಕಾರಿ ನಾಗರತ್ನ ಬಿಪಿ, ಶುಗರ್ ತಪಾಸಣೆ ನಡೆಸಿದರೆ, ಫಾರ್ಮಸಿ ಅಧಿಕಾರಿ ಸಂತೋಷ್ ಹಾಗೂ ಪ್ರಯೋಗಾಲಯ ತಂತ್ರಜ್ಞ ರೇಖಾ, ಲಕ್ಷ್ಮೀ ಮಾಲಾಪುರ ವಿವಿಧ ರಕ್ತ ಪರೀಕ್ಷೆ ನಡೆಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಅಣ್ಣಪ್ಪ ಕೆ ಸಿ ಸ್ವಾಗತಿಸಿದರೆ, ಸಮುದಾಯ ಅಧಿಕಾರಿ ಜಗದೀಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ರೂಪಾ ವಂದಿಸಿದರು.
ಬಿಸಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸುಮಾರು 50ಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ ಮಾಡಿ ಎಕ್ಸರೇ ತಪಾಸಣೆ ಮಾಡಲಾಯಿತು.

About The Author

error: Content is protected !!