ಅಥಣಿ (ಬೆಳಗಾವಿ): ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ರಸ್ತೆಯಲ್ಲಿರುವ ‘ಸುಕನ್ಯಾ ವೃದ್ಧಾಶ್ರಮ’ದಲ್ಲಿ ಹಿರಿಯ ನಾಗರಿಕರು, ನಿರ್ಗತಿಕರು, ನೊಂದವರು ಹಾಗೂ ಅನಾಥರ ಬದುಕಿಗೆ ಬಲವಾದ ಆಸರೆ ನೀಡುವ ಉದ್ದೇಶದಿಂದ 50 ಹಾಸಿಗೆಗಳ ಸಾಮರ್ಥ್ಯವುಳ್ಳ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಸಮಾಜದಲ್ಲಿ ಆಸರೆಯಿಲ್ಲದೆ ಪರದಾಡುತ್ತಿರುವ ವೃದ್ಧರು ಮತ್ತು ಅನಾಥರಿಗೆ ಸೂಕ್ತ ವಸತಿ, ಉಚಿತ ಆಹಾರ ಹಾಗೂ ಸೂಕ್ತ ಆರೋಗ್ಯ ಆರೈಕೆ ಒದಗಿಸುವುದು ಈ ನೂತನ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ದಾಸೋಹ ಕಾರ್ಯಕ್ಕೆ ಕೈಜೋಡಿಸಿ:
“ಸೇವೆಯೇ ಮಹಾ ದಾಸೋಹ” ಎಂಬ ತತ್ತ್ವದೊಂದಿಗೆ ಆರಂಭವಾಗಿರುವ ಈ ಮಹತ್ಕಾರ್ಯವು ಶೀಘ್ರವಾಗಿ ಪೂರ್ಣಗೊಳ್ಳಲು ದಯಾಶೀಲರು, ಸಮಾಜಸೇವಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಮುಕ್ತ ಮನಸ್ಸಿನಿಂದ ಧನಸಹಾಯ ಅಥವಾ ಕಟ್ಟಡ ನಿರ್ಮಾಣ ಸಾಮಗ್ರಿಗಳ ರೂಪದಲ್ಲಿ ನೆರವಿನ ಹಸ್ತ ನೀಡಬೇಕಾಗಿ ಸಂಸ್ಥೆಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ದಾನಿಗಳು ನೆರವು ನೀಡಲು ಹಾಗೂ ಸಂಪರ್ಕಿಸಲು ವಿವರ:

ಸ್ಥಳ: ಸುಕನ್ಯಾ ವೃದ್ಧಾಶ್ರಮ, ಅಥಣಿ – ಚಮಕೇರಿ ರಸ್ತೆ, ಅಥಣಿ.
ಸಂಪರ್ಕ ಸಂಖ್ಯೆ: 9880635268
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಸರೆಯಾಗುವ ಈ ಪುಣ್ಯ ಯೋಜನೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿ, ನೊಂದ ಜೀವಗಳಿಗೆ ನೆರವಾಗಬೇಕಾಗಿ ಸಂಸ್ಥೆಯ ಸಂಘಟಕರು ವಿನಂತಿಸಿದ್ದಾರೆ.
ವರದಿ: ಮಹೇಶ್ ಶರ್ಮಾ, ಅಥಣಿ


More Stories
ಅಥಣಿ: ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ತುಕ್ಕು ಹಿಡಿದ ವಿದ್ಯುತ್ ಕಂಬ — ಪಾದಚಾರಿಗಳು, ಬಡ ವ್ಯಾಪಾರಿಗಳ ಜೀವಕ್ಕೆ ಕಂಟಕ!
ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯಿಂದ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬ ಆಚರಣೆ
ಮದಭಾವಿ ಸರ್ಕಾರಿ ಶಾಲೆಯಲ್ಲಿ ನೂತನ ವೇದಿಕೆ ನಿರ್ಮಾಣಕ್ಕೆ ಚಾಲನೆ: ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ