August 23, 2026

ನಿವೃತ್ತ ಯೋಧರಿಗೆ ಅದ್ದೂರಿ ಮೆರವಣಿಗೆ, ಅಭಿನಂದನಾ ಸಮಾರಂಭ

ಗುಂಡ್ಲುಪೇಟೆ: ಪಟ್ಟಣದ ಗುರುಭವನದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ, ಸಂಘಟನೆಯ ಜಿಲ್ಲಾಧ್ಯಕ್ಷ ಈಶ್ವರ್ ಅವರ ನೇತೃತ್ವ ಹಾಗೂ ಸಯ್ಯದ್ ಅನ್ಸರ್ ಅವರ ಸಹಕಾರದಲ್ಲಿ ಮೂವರು ನಿವೃತ್ತ ಸೈನಿಕರಿಗೆ ಅದ್ದೂರಿ ಮೆರವಣಿಗೆ ಮತ್ತು ಅಭಿನಂದನಾ ಕಾರ್ಯಕ್ರಮ ನೆರವೇರಿತು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಗೌರವಾಧ್ಯಕ್ಷೆ ಪುಟ್ಟಮ್ಮ ವಹಿಸಿದ್ದರೆ, ಮಾಜಿ ಸೈನಿಕ ಕೆ.ಸಿ. ನಾಗಪ್ಪ ಅವರ ಸಹಯೋಗ ಕಾರ್ಯಕ್ರಮಕ್ಕಿತ್ತು.

ದೇವರಾಜ ಅರಸು ಕ್ರೀಡಾಂಗಣದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಷಣ್ಮುಗಂ, ಸರ್ಕಲ್ ಇನ್ಸ್‌ಪೆಕ್ಟರ್ ಜಯಕುಮಾರ್ ಹಾಗೂ ಪುರಸಭೆ ಮುಖ್ಯ ಅಧಿಕಾರಿ ಸರವಣ ಅವರು ಯೋಧರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕ್ರೀಡಾಂಗಣದಿಂದ ಆರಂಭವಾದ ಮೆರವಣಿಗೆಯಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಯೋಧರಿಗೆ ಜೈಕಾರ ಕೂಗುತ್ತಾ, ರಾಷ್ಟ್ರೀಯ ಹೆದ್ದಾರಿಯ ಮೂಲಕ ಗುರುಭವನದವರೆಗೆ ತೆರಳಿದರು.

ಗುರುಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಬಿ.ಕೆ. ರಂಗಸ್ವಾಮಿ, ಶ್ರೀ ರಾಜು ಹಾಗೂ ಶ್ರೀಕಾಂತ ಕಂಠಿ ಅವರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು.

ಮಾಜಿ ಯೋಧ ಕೆ.ಸಿ. ನಾಗಪ್ಪ ಅವರು ಸನ್ಮಾನಿತ ಯೋಧರನ್ನು ಸಭೆಗೆ ಪರಿಚಯಿಸಿದರು. ‘ಗವಿಗರ್ಜನೆ’ ಪತ್ರಿಕೆಯ ಸಂಪಾದಕ ಗವಿಸ್ವಾಮಿ ಅವರು ಯೋಧರ ದೇಶಸೇವೆ ಹಾಗೂ ತಪಸ್ಸಿನ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ಮುಬಾರಕ್ ಅವರು ಯಶಸ್ವಿಯಾಗಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷ ಎಸ್. ಈಶ್ವರ್, ತಾಲೂಕು ಅಧ್ಯಕ್ಷ ಸಯ್ಯದ್ ಅನ್ಸರ್, ಮಹಿಳಾ ಮುಖಂಡರಾದ ರೇಖಾ ಭಾಸ್ಕರ್, ತಾಲೂಕು ಮಹಿಳಾ ಅಧ್ಯಕ್ಷೆ ಸವಿತಾ, ಲಕ್ಕೂರ್ ನಾಗರಾಜು, ಅವಿನಾಶ್, ಸದಾನಂದ ಶಿವನಂಜಪ್ಪ, ಅಜಿತ್ ಕುಮಾರ್, ಹಾಗೂ ವಿವಿಧ ಹೋಬಳಿ ಅಧ್ಯಕ್ಷರಾದ ರೇಖಾ (ಅಂಗಳ), ಮಹೇಶ (ಬೇಗೂರು), ಪುಟ್ಟು ಉಪಸ್ಥಿತರಿದ್ದರು.

ಹಿರಿಯ ಕನ್ನಡಪರ ಹೋರಾಟಗಾರ ಬ್ರಹ್ಮಾನಂದ ಮಾಸ್ಟರ್, ಮಾನವ ಬಂಧುತ್ವ ಸಂಘಟನೆಯ ಮಾರಳ್ಳಿ ಸುಭಾಷ್, ಸೋಮಣ್ಣ, ಕರವೇ ರಮೇಶ್ ನಾಯಕ್, ಗಡಿನಾಡು ರಕ್ಷಣಾ ಸೇನೆಯ ಮುನೀರ್ ಪಾಷಾ, ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯ ಚಾ.ಗು. ನಾಗರಾಜು, ದೇವರಾಜು, ಅಬ್ದುಲ್ ಮಾಲಿಕ್, ಸುರೇಶ ನಾಯಕ, ಶ್ರೀನಿವಾಸ್ ನಾಯಕ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.                                     ವರದಿ : ಸದಾನಂದ ಕನ್ನೇಗಾಲ, ಗುಂಡ್ಲಪೇಟೆ

    About The Author

    error: Content is protected !!