

ಭಟ್ಕಳ: ಸ್ವಾತಂತ್ರ್ಯೋತ್ತರ ಪೀಳಿಗೆಗೆ ‘ಅಖಂಡ ಭಾರತ’ದ ಕಲ್ಪನೆ, ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸ ಹಾಗೂ ದೇಶಕ್ಕಾಗಿ ಬಲಿದಾನ ಮಾಡಿದ ಸಾವಿರಾರು ಹೋರಾಟಗಾರರ ತ್ಯಾಗವನ್ನು ಪರಿಚಯಿಸುವ ಅಗತ್ಯವಿದೆ ಎಂದು ದಕ್ಷಿಣ ಭಾರತ ಕ್ಷೇತ್ರೀಯ ಸಂಚಾಲಕ ಹಾಗೂ ಸಂಘದ ವಕ್ತಾರ ಜಗದೀಶ ಕಾರಂತ ಹೇಳಿದರು.

80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಭಟ್ಕಳ ಹಾಗೂ ಪರಿವಾರ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ನಿಚ್ಚಲಮಕ್ಕಿ ಸಭಾಭವನದಲ್ಲಿ ಆಯೋಜಿಸಿದ್ದ **’ಅಖಂಡ ಭಾರತ ಸಂಕಲ್ಪ ದಿನ’**ದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.

ಹೋರಾಟಗಾರರ ತ್ಯಾಗ ಸ್ಮರಣೆ: ಸ್ವಾತಂತ್ರ್ಯವು ಕೇವಲ ಕೆಲವೇ ವ್ಯಕ್ತಿಗಳಿಂದ ದೊರೆತಿದ್ದಲ್ಲ. ಬ್ರಿಟಿಷರ ದಮನ ಹಾಗೂ ಹಿಂಸೆಯನ್ನು ಎದುರಿಸಿ ಹೋರಾಡಿದ ವೀರ ಸಾವರ್ಕರ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್ ಸೇರಿದಂತೆ ಅಸಂಖ್ಯಾತ ಕ್ರಾಂತಿಕಾರಿಗಳ ಬಲಿದಾನವನ್ನು ಯುವಜನರಿಗೆ ತಿಳಿಸಿಕೊಡಬೇಕು.

ಹಕ್ಕು ಮತ್ತು ಕರ್ತವ್ಯ: ಇಂದಿನ ನಾಗರಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವಿದ್ದರೂ, ದೇಶಪ್ರೇಮದ ಕರ್ತವ್ಯಗಳ ಕುರಿತು ಸಮರ್ಪಕ ಅರಿವಿಲ್ಲದಿರುವುದು ಆತಂಕಕಾರಿ. ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ಪಾಲಿಸುವ ಮನೋಭಾವ ಬೆಳೆಯಬೇಕು.


ದೇಶ ವಿಭಜನೆಯ ದುರಂತ: ಭಾರತ ವಿಭಜನೆಯ ಸಂದರ್ಭದಲ್ಲಿ ಉಂಟಾದ ಸಾಮಾಜಿಕ ಹಾಗೂ ಮಾನವೀಯ ದುರಂತಗಳನ್ನು ಇತಿಹಾಸದ ಹಿನ್ನೆಲೆಯಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೂ ಮುನ್ನ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ದೇವಸ್ಥಾನದಿಂದ ಆರಂಭವಾದ ಭವ್ಯ ಪಂಜಿನ ಮೆರವಣಿಗೆಯು ನಗರದ ಮಾರಿಕಟ್ಟೆ, ಹನುಮಾನ್ ದೇವಸ್ಥಾನ, ಹೂವಿನ ಮಾರುಕಟ್ಟೆ ಹಾಗೂ ಶಂಸುದ್ದೀನ್ ಸರ್ಕಲ್ ಮೂಲಕ ಸಾಗಿತು.
ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆ ಭಟ್ಕಳ ಘಟಕದ ಸಂಚಾಲಕ ಜಯಂತ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ಗೋವಿಂದ ನಾಯ್ಕ ಸೇರಿದಂತೆ ಹಲವು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಹಿಂದೂ ಕಾರ್ಯಕರ್ತ ಅಣ್ಣಪ್ಪ ನಾಯ್ಕ ಸ್ವಾಗತಿಸಿದರೆ, ಪಾಂಡುರಂಗ ಗೊಂಡ ಧನ್ಯವಾದ ಸಮರ್ಪಿಸಿದರು. ಪತ್ರಕರ್ತ ಈಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ