August 21, 2026

ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ: ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಥಮ, ರಾಜ್ಯ ಮಟ್ಟಕ್ಕೆ ಆಯ್ಕೆ!

ಹೊನ್ನಾವರ: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಕಾರವಾರ, ಹೊನ್ನಾವರದ ದಿ ಮಾರ್ಥೋಮಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಹಾಗೂ ಕುಮಟಾದ ಸೃಷ್ಟಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ 8, 9ನೇ ತರಗತಿ ಹಾಗೂ ಪ್ರಥಮ ಪಿ.ಯು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಹೊನ್ನಾವರದ ಮಾರ್ಥೋಮಾ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.

ಜಿಲ್ಲೆಯ ವಿವಿಧ ತಾಲೂಕುಗಳ ಒಟ್ಟು 33 ಶಾಲೆಗಳಿಂದ 66 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

  • ಪ್ರಥಮ ಸ್ಥಾನ (ರಾಜ್ಯ ಮಟ್ಟಕ್ಕೆ ಆಯ್ಕೆ): ಕುಮಟಾ ತಾಲೂಕಿನ ಕೆನರಾ ಎಕ್ಸಲೆನ್ಸ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳಾದ ಗೋರೆಯ ಕುಮಾರ ಹಿಮಾಂಶು ಹೆಗಡೆ ಹಾಗೂ ಆಶ್ರಿತ ಹೆಗಡೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
  • ದ್ವಿತೀಯ ಸ್ಥಾನ: ಕುಮಟಾದ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಕುಮಾರಿ ದಿಯಾ ಆರ್. ಶೇಟ್ ಹಾಗೂ ಕುಮಾರ ಓಂಕಾರ್ ಭಾಗ್ವತ್.
  • ತೃತೀಯ ಸ್ಥಾನ: ಹೊನ್ನಾವರದ ಎಸ್‌ಡಿಎಂ ಪಿಯು ಕಾಲೇಜಿನ ಸ್ವಾತಿ ಸುಬ್ರಹ್ಮಣ್ಯ ಶೇಟ್ ಹಾಗೂ ಅಮೃತ ರಾಘವೇಂದ್ರ ಶೇಟ್.
  • ಸಮಾಧಾನಕರ ಬಹುಮಾನ: ಹೊನ್ನಾವರದ ಮಾರ್ಥೋಮಾ ಸೆಂಟ್ರಲ್ ಸ್ಕೂಲಿನ ರೋಹನ್ ಆರ್. ನಾಯ್ಕ ಹಾಗೂ ದಕ್ಷಾ ಜಿ., ಶಿರಸಿಯ ಲಾಯನ್ಸ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ಪಲ್ಲವಿ ಜೋಶಿ ಹಾಗೂ ಅನ್ಸಿಕಾ ಹೆಗಡೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ಅಚ್ಯುತ್ ನಾಯ್ಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, “ಆರೋಗ್ಯ ಸಂಬಂಧಿತ ವಿಷಯಗಳನ್ನು ಇಂದಿನ ಹದಿಹರೆಯದವರು ನಿರ್ಲಕ್ಷಿಸಬಾರದು. ದೈನಂದಿನ ಜೀವನದಲ್ಲಿ ಉತ್ತಮ ನಡವಳಿಕೆಗಳನ್ನು ರೂಢಿಸಿಕೊಳ್ಳಬೇಕು,” ಎಂದು ಸಲಹೆ ನೀಡಿದರು.

ಮಾರ್ಥೋಮಾ ಶಾಲೆಯ ಪ್ರಿನ್ಸಿಪಾಲ್ ಐಸೋನ್ ಜೋಶುವಾ ಮಾತನಾಡಿ, ಬಹುಮಾನ ವಿಜೇತ ವಿದ್ಯಾರ್ಥಿಗಳು ಮುಂದೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲೂ ಸಾಧನೆ ಮಾಡಲು ಶ್ರಮಿಸಬೇಕು ಎಂದು ಹಾರೈಸಿದರು.

ಸಮಾರಂಭದಲ್ಲಿ ಮಾರ್ಥೋಮಾ ಸಿ.ಬಿ.ಎಸ್.ಸಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಆನ್ಸಿ ಅನ್ನಾ ಫಿಲಿಪ್ ಹಾಗೂ ಜಿಲ್ಲಾ ಮೇಲ್ವಿಚಾರಕ ನಿಲೇಶ್ ನಾಯಕ್ ಹಾಜರಿದ್ದರು.

ಆಪ್ತಸಮಾಲೋಚಕ ಪ್ರದೀಪ್ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ರಾಜೇಶ್ವರಿ ಕೋರ್ಲೋಸ್ಸರ್, ಹರೀಶ್ ಮೊಗೇರ್, ಶ್ರೀಕಾಂತ ಹಿರೇಮಠ ಹಾಗೂ ಉಮೇಶ್ ಕೆ. ರಸಪ್ರಶ್ನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ವಿನಾಯಕ್ ಪಟಗಾರ್ ಧನ್ಯವಾದ ಸಮರ್ಪಿಸಿದರು.

About The Author

error: Content is protected !!