September 8, 2026

ಶಿರಸಿಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿ: ವರದಿ ತಿರಸ್ಕರಿಸಲು ಹಕ್ಕು ಒತ್ತಾಯ

ಶಿರಸಿ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಸೆಪ್ಟೆಂಬರ್ 2 ರಂದು ಶಿರಸಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು.

ಮೆರವಣಿಗೆ ಹಾಗೂ ಸಭೆ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ಸ್ಥಳೀಯ ಮಾರಿಕಾಂಬಾ ದೇವಾಲಯದ ಎದುರಿನಿಂದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಸಾಗಿ, ನಗರಸಭೆ ಬಯಲು ರಂಗಮಂದಿರದಲ್ಲಿ ಬೃಹತ್ ಸಭೆಯಾಗಿ ಮಾರ್ಪಟ್ಟಿತು.

ತೀವ್ರ ಆಕ್ರೋಶ: ಮಲೆನಾಡಿನ ಭಾಗದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಿಂದಾಗುವ ತೀವ್ರ ತೊಂದರೆಗಳ ಕುರಿತು ಆತಂಕ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಮಾರ್ಗದುದ್ದಕ್ಕೂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನೇತೃತ್ವ ಹಾಗೂ ಉಪಸ್ಥಿತಿ: ರ್ಯಾಲಿಯ ನೇತೃತ್ವವನ್ನು ಜಿಲ್ಲಾ ಸಂಚಾಲಕ ಇಬ್ರಾಹಿಂ ಸಾಬ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ಶೋಭಾ ನಾಯ್ಕ, ಚಂದ್ರಶೇಖರ ಪೂಜಾರಿ ವಟಗೇರಿ, ಹರಿಹರ ನಾಯ್ಕ ಓಂಕಾರ, ನಾಗಪತಿ ಗೌಡ ಹುಕ್ಕಳ್ಳಿ, ಎಮ್ ಆರ್ ನಾಯ್ಕ, ಚಂದ್ರ ಶಾನಭಾಗ ಬಂಡಲ್, ಸೀತಾರಾಮ ಗೌಡ ಹುಕ್ಕಳ್ಳಿ, ಸಂಕೇತ ನಾಯ್ಕ ಹಲಗೇರಿ, ಸೀತಾರಾಮ ನಾಯ್ಕ ಕುಂದರಗಿ, ರಫೀಕ್ ಗೌಡಳ್ಳಿ, ಬಸ್ತ್ಯಾಂವ್ ಕಣ್ಣಿಗೆೇರಿ ಹಾಗೂ ರಾಮ ಕಲಕರಡಿ ಸೇರಿದಂತೆ ಹಲವು ಪ್ರಮುಖರು ವಹಿಸಿದ್ದರು.

    About The Author

    error: Content is protected !!