September 8, 2026

ಮುರ್ಡೇಶ್ವರದಲ್ಲಿ ಭವ್ಯ ಬಿಲ್ವಾರ್ಚನೆ: 2 ಸಾವಿರಕ್ಕೂ ಅಧಿಕ ಭಕ್ತರು ಭಾಗಿ

ಭಟ್ಕಳ: ಶ್ರಾವಣ ಮಾಸ ಕೃಷ್ಣ ಪಕ್ಷ ಏಕಾದಶಿಯ ಸೋಮವಾರದಂದು ಲೋಕಕಲ್ಯಾಣ ಹಾಗೂ ಸಕಲರ ಶ್ರೇಯೋಭಿವೃದ್ಧಿಗಾಗಿ ಮುರ್ಡೇಶ್ವರದ ಮಹಾತೋಬಾರ ಶ್ರೀ ಮುರ್ಡೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಭವ್ಯ ಬಿಲ್ವಾರ್ಚನೆ ನೆರವೇರಿತು.

ಬಿಲ್ವಪತ್ರೆ ಸಮರ್ಪಣೆ ಹಾಗೂ ಮೆರವಣಿಗೆ: ಭಕ್ತರು ತಮ್ಮ ಮನೆಗಳಿಂದ ತಂದ 108 ಬಿಲ್ವಪತ್ರೆಗಳನ್ನು ಬೆಳಿಗ್ಗೆ 9 ಗಂಟೆಯೊಳಗೆ ಶ್ರೀ ದೇವರ ಓಲಗ ಮಂಟಪದಲ್ಲಿ ಸಮರ್ಪಿಸಿದರು. ಬಳಿಕ ವಾದ್ಯಘೋಷಗಳೊಂದಿಗೆ ಓಲಗ ಮಂಟಪದಿಂದ ದೇವಸ್ಥಾನದವರೆಗೆ ಬಿಲ್ವಪತ್ರೆಗಳ ಮೆರವಣಿಗೆ ನಡೆಯಿತು.

ಪೂಜಾ ವಿಧಿವಿಧಾನ: ಪ್ರಧಾನ ಅರ್ಚಕ ವೇದಮೂರ್ತಿ ಜೈರಾಮ ಅಡಿ, ಅರ್ಚಕ ವೃಂದ ಹಾಗೂ ಸೀಮಾ ಸಮಿತಿಯ ನೇತೃತ್ವದಲ್ಲಿ ಬೆಳಿಗ್ಗೆ 10 ರಿಂದ 11.30 ರವರೆಗೆ ಭವ್ಯ ಬಿಲ್ವಾರ್ಚನೆ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನೆರವೇರಿತು.

ಅನ್ನಸಂತರ್ಪಣೆ: 2 ಸಾವಿರಕ್ಕೂ ಅಧಿಕ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದು, ಭಕ್ತರಿಗೆ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತಾದಿಗಳು ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.

    About The Author

    error: Content is protected !!