August 21, 2026

ಭಟ್ಕಳದಲ್ಲಿ ಮನೆಯ ಶೆಡ್‌ನಿಂದ ಹೋಂಡಾ ಸ್ಕೂಟಿ ಕಳವು

ಭಟ್ಕಳ: ಮನೆಯ ಶೆಡ್‌ನಲ್ಲಿ ನಿಲ್ಲಿಸಿದ್ದ ಹೋಂಡಾ ಸ್ಕೂಟಿಯೊಂದು ಕಳವಾಗಿರುವ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತೆನ್ನಮಕ್ಕಿಯ ಜನತಾ ಕಾಲೊನಿ ನಿವಾಸಿ ಈಶ್ವರ ಈರಾ ನಾಯ್ಕ (50) ಅವರು ದೂರು ನೀಡಿದ್ದು, ತಮ್ಮ ಹೋಂಡಾ ಸ್ಕೂಟಿ (KA-47/U-6936) ಕಳವಾಗಿರುವುದಾಗಿ ತಿಳಿಸಿದ್ದಾರೆ.

ದೂರುದಾರರ ಪುತ್ರ ನಾಗೇಂದ್ರ ನಾಯ್ಕ ಅವರು ಸ್ಕೂಟಿಯನ್ನು ಮನೆಯ ಶೆಡ್‌ನಲ್ಲಿ ನಿಲ್ಲಿಸಿ ಹೊರಗೆ ತೆರಳಿದ್ದರು. ಬಳಿಕ ಮಧ್ಯಾಹ್ನ ಮನೆಗೆ ಹಿಂದಿರುಗಿ ನೋಡಿದಾಗ ಶೆಡ್‌ನಲ್ಲಿ ನಿಲ್ಲಿಸಿದ್ದ ಸ್ಕೂಟಿ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ಅಪರಿಚಿತರು ಸ್ಕೂಟಿಯನ್ನು ಕಳವು ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮುರುಡೇಶ್ವರ ಪೊಲೀಸರು ಕಳುವಾದ ಸ್ಕೂಟಿ ಹಾಗೂ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

About The Author

error: Content is protected !!