ಭಟ್ಕಳ: ಜಾಮ್‌ನಗರ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರ್‌ಪಿಎಫ್ ಸಿಬ್ಬಂದಿಯೊಬ್ಬರ ₹18 ಸಾವಿರ ನಗದು ಹಾಗೂ ₹2.50 ಲಕ್ಷ ಮೌಲ್ಯದ ಚಿನ್ನದ ಸರ ಕಳುವಾಗಿರುವ ಘಟನೆ ಮುರ್ಡೇಶ್ವರ ರೈಲು ನಿಲ್ದಾಣದ ಬಳಿ ನಡೆದಿದೆ.
ಘಟನೆಯ ವಿವರ: ಮುಂಬೈನ ನಲಾಸೋಪಾರಾ ಈಸ್ಟ್ ನಿವಾಸಿ, ರೈಲ್ವೆ ಸುರಕ್ಷತಾ ಪಡೆಯ (RPF) ಸಿಬ್ಬಂದಿ ಕುಮಾರಯ್ಯ ಶಂಕರನ್ ಎಂಬವರು ದೂರು ನೀಡಿದವರಾಗಿದ್ದಾರೆ. ಅವರು ಆಗಸ್ಟ್ 18ರಂದು ಜಾಮ್‌ನಗರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 19578) ಸ್ಲೀಪರ್ ಕೋಚ್ ಎಸ್/4 ರಲ್ಲಿ ಪ್ರಯಾಣಿಸುತ್ತಿದ್ದರು.
ನಗದು, ಚಿನ್ನದ ಸರ ಚೋರಿ: ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಮುರ್ಡೇಶ್ವರ ರೈಲು ನಿಲ್ದಾಣದಲ್ಲಿ ರೈಲು ನಿಂತಿದ್ದಾಗ, ಅಪರಿಚಿತ ಕಳ್ಳರು ಅವರ ಬಳಿಯಿದ್ದ ₹18,000 ನಗದು ಹಾಗೂ ಸುಮಾರು 20 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಒಟ್ಟು ₹2.68 ಲಕ್ಷ ಮೌಲ್ಯದ ಸೊತ್ತು ಕಳುವಾಗಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.

About The Author


More Stories
ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನ: ಭಟ್ಕಳ ತೆಂಗಿನಗುಂಡಿ ಶಾಲೆಯ ವಿದ್ಯಾರ್ಥಿನಿ ದಿಶಾ ದೇವಾಡಿಗ ದ್ವಿತೀಯ
ಪೌರಾಣಿಕ ವೇಷ, ಚಂಡೆ-ವಾದನದ ಮೆರುಗು: ತೂದಳ್ಳಿ ಗಣೇಶೋತ್ಸವ ಅದ್ದೂರಿ ಸಂಪನ್ನ
ಬಿಗಿ ಪೊಲೀಸ್ ಭದ್ರತೆಯಲ್ಲಿ ಭಟ್ಕಳದಲ್ಲಿ ಅದ್ಧೂರಿ ಗಣೇಶ ವಿಸರ್ಜನೆ: ಚೌಥನಿ ಹೊಳೆಯಲ್ಲಿ ಜಲಸ್ತಂಭನ