October 23, 2026

ಕರ್ನಾಟಕ ಸಂಘ ಕತಾರ್ ವತಿಯಿಂದ ಅದ್ಧೂರಿ ‘ಅಭಿಯಂತರರ ದಿನಾಚರಣೆ’ ಹಾಗೂ ‘ಅಭಿಯಂತರ ಶ್ರೀ’ ಪ್ರಶಸ್ತಿ ಪ್ರದಾನ

ದೋಹಾ (ಕತಾರ್): ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಹಯೋಗಿ ಸಂಸ್ಥೆಯಾದ ‘ಕರ್ನಾಟಕ ಸಂಘ ಕತಾರ್’ ವತಿಯಿಂದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ‘ಅಭಿಯಂತರರ ದಿನಾಚರಣೆ’ಯನ್ನು ದೋಹಾದ ಐಸಿಸಿ ಮುಂಬೈ ಹಾಲ್‌ನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಪ್ರಶಾಂತ್ ಹಿರೇಮಠ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಹೊಸದುರ್ಗ ಸ್ವಾಗತಿಸಿದರು. ವಿಶ್ವೇಶ್ವರಯ್ಯ ಅವರ ಕೊಡುಗೆಗಳ ಕುರಿತು ವಿಡಿಯೊ ಪ್ರದರ್ಶನ ಹಾಗೂ ಕಿಶೋರ್ ವಿ., ಶ್ರೀಧರ್ ರಾವ್ ಮತ್ತು ಸುಧೀರ್ ಅಕ್ಕತಂಗೇರಹಾಳ್ ಅವರಿಂದ ತಾಂತ್ರಿಕ ಉಪನ್ಯಾಸ ನಡೆಯಿತು.

‘ಅಭಿಯಂತರ ಶ್ರೀ’ ಪ್ರಶಸ್ತಿ ಪ್ರದಾನ:

‘ಇಂಜಿನಿಯರ್ಸ್ ವಿಥೌಟ್ ಬಾರ್ಡರ್ಸ್ – ಕತಾರ್’ನ ನಿರ್ದೇಶಕರಾದ ಖಾಲಿದ್ ಅಲ್-ಸಯ್ಯದ್ ಅವರಿಗೆ ಗೌರವಪೂರ್ವಕವಾಗಿ ‘ಅಭಿಯಂತರ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಭಿಯಂತ್ರಣ ಕ್ಷೇತ್ರದಲ್ಲಿನ ಗಮನಾರ್ಹ ಕೊಡುಗೆಗಾಗಿ ದೋಹಾದ ವಿಕ್ರಾಂತ್ ಪಾಟೀಲ್ ಅವರಿಗೂ ‘ಅಭಿಯಂತರ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. (ಶುಭಾ ರಾವ್ ಅವರು ಪ್ರಶಸ್ತಿ ಪುರಸ್ಕೃತರ ಸಾಧನೆಗಳನ್ನು ಪರಿಚಯಿಸಿದರು).

ಕಾರ್ಯಕ್ರಮದಲ್ಲಿ ಐಬಿಸಿಎಫ್ ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ, ಐಸಿಸಿ ಪ್ರತಿನಿಧಿ ಸಂದೀಪ್ ರೆಡ್ಡಿ, ಸಲಹಾ ಮಂಡಳಿ ಅಧ್ಯಕ್ಷ ಡಾ. ರವಿ ಶೆಟ್ಟಿ ಸೇರಿದಂತೆ ಪ್ರಮುಖ ಗಣ್ಯರು ಹಾಗೂ ಕನ್ನಡಿಗರು ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ಅನಿಲ್ ಭಾಸಗಿ ವಂದಿಸಿದರು.

About The Author

error: Content is protected !!