October 23, 2026

ನಾಗಮಾಸ್ತಿ ಕ್ಷೇತ್ರದಲ್ಲಿ ಮೂರನೇ ವರ್ಷದ ನವರಾತ್ರಿ ಮಹೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆ

ಭಟ್ಕಳ: ತಾಲೂಕಿನ ರೈಲ್ವೆ ಸ್ಟೇಷನ್ ರಸ್ತೆ, ಮಣಕುಳಿಯ ಶ್ರೀ ನಾಗಮಾಸ್ತಿ ಕ್ಷೇತ್ರದಲ್ಲಿ ಮೂರನೇ ವರ್ಷದ ನವರಾತ್ರಿ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ.

ಮಹೋತ್ಸವದ ಅಂಗವಾಗಿ ಮಂಗಳವಾರ ಶ್ರೀದೇವಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿ, ನವರಾತ್ರಿ ಕಾರ್ಯಕ್ರಮದ ಅಧಿಕೃತ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕ್ಷೇತ್ರದ ಅರ್ಚಕರಾದ ಶ್ರೀ ಪರಮೇಶ್ವರ ಶಾಸ್ತ್ರಿಗಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಾ ಕಾರ್ಯಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷರಾದ ಸತೀಶಕುಮಾರ್, ಉಪಾಧ್ಯಕ್ಷ ನಾಗರಾಜ ನಾಯ್ಕ್, ಸದಸ್ಯರಾದ ಸೂರ್ಯಕಾಂತ್ ದೇವಾಡಿಗ, ಶ್ರೀಧರ್ ನಾಯ್ಕ್, ಜಿ.ಪಿ. ರಾಜಶೇಖರ್, ಗಿರಿಜಾ ದೇವಾಡಿಗ, ರಾಮನಾಥ ಬಳೆಗಾರ, ಕಾಶಿನಾಥ ಪ್ರಭು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

About The Author

error: Content is protected !!