October 21, 2026

ಸೌ|| ಕಮಲಾಬಾಯಿ ಪಿಕಳೆ ಹೈಸ್ಕೂಲ್ ವಿದ್ಯಾರ್ಥಿಗಳ ಭರ್ಜರಿ ಸಾಧನೆ; 5 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಕತಗಾಲ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉತ್ತರ ಕನ್ನಡ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಭಟ್ಕಳ ಇವುಗಳ ಸಹಯೋಗದಲ್ಲಿ ಬೆಳಕೆಯ ಸರಕಾರಿ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ನಡೆದ 2026-27ನೇ ಸಾಲಿನ ಜಿಲ್ಲಾಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಕ ಕೆನರಾ ವೆಲ್ಫೇರ್ ಟ್ರಸ್ಟ್‌ನ ಸೌ|| ಕಮಲಾಬಾಯಿ ಪಿಕಳೆ ಹೈಸ್ಕೂಲ್ ಕತಗಾಲದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ವಿಜೇತ ವಿದ್ಯಾರ್ಥಿಗಳ ವಿವರ:

17 ವರ್ಷದೊಳಗಿನ ಬಾಲಕರ ವಿಭಾಗ:

ನಾಗೇಂದ್ರ ಈಶ್ವರ ಗೌಡ: ಉದ್ದ ಜಿಗಿತದಲ್ಲಿ ಪ್ರಥಮ ಹಾಗೂ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ.

ಸುಧೀರ ಜಟ್ಟು ಗೌಡ: 400 ಮೀ. ಹರ್ಡಲ್ಸ್‌ನಲ್ಲಿ ತೃತೀಯ ಸ್ಥಾನ.

14 ವರ್ಷದೊಳಗಿನ ಬಾಲಕರ ವಿಭಾಗ:

ದಿಗಂತಕುಮಾರ ಮಂಜುನಾಥ ಗೌಡ: 80 ಮೀ. ಹರ್ಡಲ್ಸ್‌ನಲ್ಲಿ ತೃತೀಯ ಸ್ಥಾನ.

17 ವರ್ಷದೊಳಗಿನ ಬಾಲಕಿಯರ ವಿಭಾಗ:

ತೀರ್ಥನಾ ಶಿವು ಗೌಡ: ತ್ರಿವಿಧ ಜಿಗಿತದಲ್ಲಿ ಪ್ರಥಮ ಹಾಗೂ 4\times100 ಮೀ. ರಿಲೇಯಲ್ಲಿ ದ್ವಿತೀಯ ಸ್ಥಾನ.

ಸೌಮ್ಯ ಬೀರಪ್ಪ ಅಂಬಿಗ: ಪೋಲ್ ವಾಲ್ಟ್‌ನಲ್ಲಿ ದ್ವಿತೀಯ ಹಾಗೂ 4\times100 ಮೀ. ರಿಲೇಯಲ್ಲಿ ದ್ವಿತೀಯ ಸ್ಥಾನ.

ರಂಜಿತಾ ರಾಮಚಂದ್ರ ನಾಯ್ಕ: 4\times100 ಮೀ. ರಿಲೇಯಲ್ಲಿ ದ್ವಿತೀಯ ಸ್ಥಾನ.

ಅಪೇಕ್ಷಾ ರಾಜು ನಾಯ್ಕ: 4\times100 ಮೀ. ರಿಲೇಯಲ್ಲಿ ದ್ವಿತೀಯ ಸ್ಥಾನ.

ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ: ಬಾಲಕಿಯರ 4\times100 ಮೀ. ರಿಲೇ ತಂಡದಲ್ಲಿ ದ್ವಿತೀಯ ಸ್ಥಾನ ಪಡೆದ ಒಟ್ಟು 5 ವಿದ್ಯಾರ್ಥಿಗಳು ನವೆಂಬರ್ 01 ರಿಂದ 03 ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಶಾಲೆ, ಟ್ರಸ್ಟ್ ಹಾಗೂ ತಾಲೂಕು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಸಾಧನೆಗೈದ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಕೃಷ್ಣ ಆರ್. ಗೌಡ ಅವರು ತರಬೇತಿ ನೀಡಿದ್ದರು.

    ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಆಡಳಿತಾಧಿಕಾರಿಗಳು, ಟ್ರಸ್ಟಿಗಳು, ಶಾಲಾಭಿವೃದ್ಧಿ ಸಮಿತಿಯವರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ದೈಹಿಕ ಶಿಕ್ಷಣ ಪರಿವೀಕ್ಷಕರು, ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಎಸ್.ಎಸ್. ಕೊರವರ, ಸಿಬ್ಬಂದಿ ವರ್ಗ, ಹಳೆಯ ವಿದ್ಯಾರ್ಥಿಗಳು ಹಾಗೂ ಊರಿನ ನಾಗರಿಕರು ಅಭಿನಂದಿಸಿ, ರಾಜ್ಯಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.

    About The Author

    error: Content is protected !!