ಗೋವಾ: ಕಳೆದ ಎರಡು ದಶಕಗಳಿಂದ ಧನಾತ್ಮಕ ಪತ್ರಿಕೋದ್ಯಮದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವ ಪತ್ರಕರ್ತ ಹಾಗೂ ‘ಸಂಪದ ಸಾಲು’ ಪತ್ರಿಕೆಯ ಸಂಪಾದಕ ವೆಂಕಟೇಶ ಎಸ್. ಸಂಪ ಅವರಿಗೆ ಪ್ರತಿಷ್ಠಿತ ‘ಇಂಟರ್ನ್ಯಾಷನಲ್ ನೋಬ್ಲರ್ ಅವಾರ್ಡ್–೨೦೨೬’ ಪ್ರದಾನ ಮಾಡಿ ಗೌರವಿಸಲಾಯಿತು.
ಜಿಎಸ್ ಹೈ-ಟೆಕ್ ಸೊಲ್ಯೂಷನ್ಸ್ ಸಂಸ್ಥೆ ಮತ್ತು ಕನ್ನಡ ಸ್ನೇಹ ಬಳಗದ ವತಿಯಿಂದ ಗೋವಾದ ವಾಸ್ಕೋದಲ್ಲಿರುವ ರವೀಂದ್ರ ಭವನದಲ್ಲಿ ಅಕ್ಟೋಬರ್ ೨೫ರಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಈ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಾ. ಜಿ. ಶಿವಣ್ಣ, ಬಸವಲಿಂಗ ಶರಣರು, ಮಲ್ಲಿಕಾರ್ಜುನ ಬೃಂಗಿಮಠ, ಸಿದ್ದಣ್ಣ ಮೇಟಿ, ಕಲೀಮ್ ಹಾಗೂ ಎಸ್. ಎಸ್. ರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದು ಪ್ರಶಸ್ತಿ ಹಸ್ತಾಂತರಿಸಿದರು.
೨೦ ವರ್ಷಗಳ ಧನಾತ್ಮಕ ಪತ್ರಿಕೋದ್ಯಮ: ವೆಂಕಟೇಶ ಎಸ್. ಸಂಪ ಅವರು ಕಳೆದ ೨೦ ವರ್ಷಗಳಿಂದ ‘ಸಂಪದ ಸಾಲು’ ಪತ್ರಿಕೆಯ ಮೂಲಕ ಸಮಾಜಮುಖಿ ಚಿಂತನೆ, ಮಾನವೀಯ ಮೌಲ್ಯ ಹಾಗೂ ಸಕಾರಾತ್ಮಕ ಬದಲಾವಣೆಯ ಆಶಯಗಳನ್ನು ಪ್ರಚುರಪಡಿಸುತ್ತಿದ್ದಾರೆ. ಇವರ ಸಾವಿರಾರು ಲೇಖನಗಳು ಹಾಗೂ ವಿವಿಧ ಪತ್ರಿಕೆಗಳ ಅಂಕಣ ಬರಹಗಳು ಓದುಗರ ಮೆಚ್ಚುಗೆ ಗಳಿಸಿವೆ.
ಇದಲ್ಲದೆ ರೇಡಿಯೋ, ದೂರದರ್ಶನ, ಸಿನಿಮಾ ಹಾಗೂ ಧಾರಾವಾಹಿಗಳಲ್ಲೂ ಅಭಿನಯಿಸುವ ಮೂಲಕ ಬಹುಮುಖ ಪ್ರತಿಭೆ ಮೆರೆದಿರುವ ಇವರು, ಎಂಬಿಎ ಪದವೀಧರರಾಗಿ ಸಾವಯವ ಹಾಗೂ ಮಿಶ್ರ ತಳಿ ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ‘ಸಂಪದ ಫೌಂಡೇಶನ್ ಫಾರ್ ಪಬ್ಲಿಕ್ ಅವೇರ್ನೆಸ್’ ಮೂಲಕ ರಕ್ತದಾನ, ನೇತ್ರದಾನ, ಪರಿಸರ ಹಾಗೂ ಜಲ ಸಂರಕ್ಷಣೆಯಂತಹ ಸಾಮಾಜಿಕ ಅಭಿಯಾನಗಳನ್ನು ನಡೆಸುತ್ತಿದ್ದಾರೆ.

ಈಗಾಗಲೇ KUWJ ರಾಜ್ಯ ಪ್ರಶಸ್ತಿ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿರುವ ವೆಂಕಟೇಶ ಸಂಪ ಅವರಿಗೆ ಈ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ಅವರ ಸಾಧನೆಗೆ ಸಂದ ಮತ್ತೊಂದು ಕಿರೀಟವಾಗಿದೆ.
About The Author


More Stories
ಹಾಳಾದ ರಸ್ತೆ ದುರಸ್ತಿಗೆ ಆಗ್ರಹಿಸಿ ಕರವೇ ವತಿಯಿಂದ ರಸ್ತೆ ತಡೆ ಪ್ರತಿಭಟನೆ
80 ಅಡಿ ಆಳದ ಬಾವಿಗೆ ಬಿದ್ದ ನಾಯಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಮೋಳೆ ಗ್ರಾಮದ ಬಸ್ ನಿಲ್ದಾಣದ ಎದುರು ಕಸದ ರಾಶಿ; ದುರ್ನಾತದಿಂದ ಸಾರ್ವಜನಿಕರ ಪರದಾಟ, ಕ್ರಮಕ್ಕೆ ಆಗ್ರಹ