November 22, 2026

ಇಡಗುಂಜಿ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ: ರಾಜ್ಯಮಟ್ಟದ ಪಾತ್ರಾಭಿನಯ ಸ್ಪರ್ಧೆಗೆ ಆಯ್ಕೆ

ಇಡಗುಂಜಿ (ಹೊನ್ನಾವರ) ; ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಕುಮಟಾ ಇವರ ನೇತೃತ್ವದಲ್ಲಿ, ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ನಡೆದ ಜಿಲ್ಲಾಮಟ್ಟದ ‘ಪಾತ್ರಾಭಿನಯ’ ಸ್ಪರ್ಧೆಯಲ್ಲಿ ಹೊನ್ನಾವರ ತಾಲೂಕಿನ ಇಡಗುಂಜಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಶಾಲೆ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಿರುವುದು ಇದು ಮೂರನೇ ಬಾರಿಯಾಗಿದೆ.

ಶಾಲೆಯ ಶಿಕ್ಷಕ ಆನಂದ ನಾಯ್ಕ ಅವರ ರಚನೆ ಹಾಗೂ ನಿರ್ದೇಶನದಲ್ಲಿ, ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಈ ಸಾಧನೆ ಮೂಡಿಬಂದಿದೆ.

ಅರ್ಪಿತಾ ವಿನಾಯಕ ಮಹಾಲೆ, ಚೈತನ್ಯ ಸತೀಶ ನಾಯ್ಕ, ಧ್ರುವ ಸಂತೋಷ ಕೊರ್ತಿ, ಸಹನಾ ಸತೀಶ ನಾಯ್ಕ ಹಾಗೂ ಪ್ರೀತಮ ದಿನೇಶ ಮರಾಠಿ ಅತ್ಯುತ್ತಮ ಅಭಿನಯ ಪ್ರದರ್ಶಿಸಿದ್ದಾರೆ.

ಡಯಟ್ ಪ್ರಾಂಶುಪಾಲರಾದ ಎನ್.ಆರ್. ಹೆಗಡೆ, ಉಪ ಪ್ರಾಂಶುಪಾಲರಾದ ಜಿ.ಎಸ್. ಭಟ್, ಉಪನ್ಯಾಸಕರಾದ ಭಾರತಿ ನಾಯಕ, ಅಂಜನಾ ನಾಯ್ಕ, ಮುಕ್ತಾ ನಾಯಕ, ಶೀಲಾ ನಾಯಕ, ನಾಗರಾಜ ನಾಯ್ಕ, ಶಿವಾನಂದ ನಾಯ್ಕ, ಹೊನ್ನಾವರ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಎಸ್. ಭಜಂತ್ರಿ, ಎನ್.ಪಿ.ಇ.ಪಿ ನೋಡಲ್ ಅಧಿಕಾರಿಗಳಾದ ಹೇಮಾ ಗುನಗಾ ಹಾಗೂ ಸಮನ್ವಯಾಧಿಕಾರಿಗಳಾದ ಜಯಶ್ರೀ ನಾಯ್ಕ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ರಾಧಾಕೃಷ್ಣ ಭಟ್ ಹಾಗೂ ಸರ್ವ ಸದಸ್ಯರು, ಪಾಲಕ-ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಶಾಲೆಯ ಮುಖ್ಯಾಧ್ಯಾಪಕರಾದ ಆಶಾ ವಿ. ಪೈ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

    About The Author

    error: Content is protected !!