ಇಂಟರ್‌ನ್ಯಾಷನಲ್ ಮಾಸ್ಟರ್‌ಗಳ ವಿರುದ್ಧ ಸತತ ಗೆಲುವು; ೧೯೩೦ ರೇಟಿಂಗ್ ತಲುಪಿ ಅಂಚೆ ಇಲಾಖೆ ಉದ್ಯೋಗಿ ಸಾಧನೆ
ಹೊನ್ನಾವರ (ಉತ್ತರ ಕನ್ನಡ): ಕಿರ್ಗಿಸ್ತಾನ್‌ನ ಬಿಷ್‌ಕೇಕ್‌ನಲ್ಲಿ ಅಕ್ಟೋಬರ್ ೨೯ರಿಂದ ನವೆಂಬರ್ ೭ರವರೆಗೆ ಜರುಗಿದ ವಿಶೇಷ ಚೇತನರ ೪ನೇ ಏಷ್ಯನ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹೊನ್ನಾವರದ ಸಮರ್ಥ ಜಗದೀಶ್ ರಾವ್ ಅವರು ಪುರುಷರ ವಿಭಾಗದಲ್ಲಿ ತೀವ್ರ ಪೈಪೋಟಿ ನಡೆಸಿ ೪ನೇ ಸ್ಥಾನ ಪಡೆದುಕೊಂಡಿದ್ದಾರೆ.


ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಮರ್ಥ ರಾವ್, ಟೈ ಬ್ರೇಕ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಪದಕದಿಂದ ವಂಚಿತರಾದರು. ಆದಾಗ್ಯೂ, ಇಬ್ಬರು ಪ್ರಮುಖ ಇಂಟರ್‌ನ್ಯಾಷನಲ್ ಮಾಸ್ಟರ್ (IM) ಆಟಗಾರರನ್ನು ಮಣಿಸುವ ಮೂಲಕ ಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿದರು.

ಫಿಡೆ ರೇಟಿಂಗ್ ಹೆಚ್ಚಳ: ಟೂರ್ನಿಯಲ್ಲಿ ಒಟ್ಟು ೯ ಸುತ್ತುಗಳಲ್ಲಿ ೬.೫ ಅಂಕಗಳನ್ನು ಗಳಿಸುವ ಮೂಲಕ ಭಾರತದ ಪರವಾಗಿ ಭಾಗವಹಿಸಿದ ಆಟಗಾರರ ಪೈಕಿ ಅತ್ಯಂತ ಹೆಚ್ಚಿನ ಅಂಕ ಗಳಿಸಿದ ಸಾಧನೆ ಮಾಡಿದರು. ಈ ಅತ್ಯುತ್ತಮ ಪ್ರದರ್ಶನದಿಂದಾಗಿ ತಮ್ಮ ಫಿಡೆ (FIDE) ರೇಟಿಂಗ್‌ನಲ್ಲಿ ೩೬ ಪಾಯಿಂಟ್‌ಗಳನ್ನು ಹೆಚ್ಚಿಸಿಕೊಂಡಿದ್ದು, ಅವರ ಪ್ರಸ್ತುತ ರೇಟಿಂಗ್ ೧೯೩೦ಕ್ಕೆ ತಲುಪಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೀರ್ತಿ ಹೆಚ್ಚಿಸಿರುವ ಸಮರ್ಥ ಜಗದೀಶ್ ರಾವ್ ಅವರ ಮುಂದಿನ ಕ್ರೀಡಾ ಪಯಣಕ್ಕೆ ಅಭಿನಂದನೆಗಳು ಹಾಗೂ ಶುಭಹಾರೈಕೆಗಳು ಹರಿದುಬಂದಿವೆ.

More Stories
ಮಾಜಿ ಸೈನಿಕ, ನಾಮಧಾರಿ ಸಮಾಜದ ಹಿರಿಯ ಮುಖಂಡ ವಾಮನ ನಾಯ್ಕ ಮಂಕಿ ನಿಧನ
ಹೊನ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಗೆ ಜಿಲ್ಲೆಯ ‘ಉತ್ತಮ ಅರ್ಬನ್ ಬ್ಯಾಂಕ್’ ಪ್ರಶಸ್ತಿ
ಹೊನ್ನಾವರ: ಕೋಟೆಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜೃಂಭಣೆಯ ‘ಮಕ್ಕಳ ಹಬ್ಬ’