ಆರ್.ಎನ್. ಶೆಟ್ಟಿ ಪಿಯು ಕಾಲೇಜಿನಲ್ಲಿ ಆಯೋಜನೆ; ರಾಜ್ಯ ಮಟ್ಟದಲ್ಲೂ ಮಿಂಚಿ ತಾಲೂಕಿಗೆ ಕೀರ್ತಿ ತರಲು ಗಣ್ಯರ ಕರೆ
ಮುರುಡೇಶ್ವರ (ಉತ್ತರ ಕನ್ನಡ): ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರ ಕಚೇರಿ ಕಾರವಾರ ಹಾಗೂ ಮುರುಡೇಶ್ವರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಭಟ್ಕಳ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳು ಅತ್ಯಂತ ಯಶಸ್ವಿಯಾಗಿ ನೆರವೇರಿದವು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಮಟಾ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (DIET) ಉಪಪ್ರಾಚಾರ್ಯ ಜಿ.ಎಸ್. ಭಟ್, ಹಲವು ನಿದರ್ಶನಗಳೊಂದಿಗೆ ಸ್ಪರ್ಧಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಸ್ಪೂರ್ತಿದಾಯಕ ನುಡಿಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ಇತಿಹಾಸ ಉಪನ್ಯಾಸಕ ಎಂ.ಎಸ್. ಹೆಗಡೆ ಮಾತನಾಡಿ, “ತಾಲೂಕು ಮಟ್ಟದ ಈ ಸ್ಪರ್ಧೆಗಳಲ್ಲಿ ವಿಜೇತರಾಗುವ ವಿದ್ಯಾರ್ಥಿಗಳು ಮುಂದೆ ಜಿಲ್ಲಾ, ವಲಯ ಹಾಗೂ ರಾಜ್ಯ ಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡಿ ತಾಲೂಕಿಗೆ ಕೀರ್ತಿ ತರಬೇಕು” ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಅಶ್ವಿನಿ ಶೇಟ್ ವಹಿಸಿದ್ದರು. ಉದ್ಘಾಟನಾ ಸಮಾರಂಭದ ಬಳಿಕ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಅತ್ಯಂತ ಉತ್ಸಾಹದಿಂದ ನಡೆದವು. ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಆರ್.ಎನ್.ಎಸ್. ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಕೇಶವಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಮಾನ್ಯ ನಾಯ್ಕ ಸ್ವಾಗತಿಸಿದರು. ಕುಮಾರಿ ಭೂಮಿಕಾ ನಾಯ್ಕ ಹಾಗೂ ಕುಮಾರಿ ರಶ್ಮಿ ಆಚಾರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ಕುಮಾರಿ ಪ್ರೇಕ್ಷಾ ಹರಿಕಂತ್ರ ವಂದನಾರ್ಪಣೆ ನೆರವೇರಿಸಿದರು.

More Stories
ಮುರುಡೇಶ್ವರ: ಬೀನಾ ವೈದ್ಯ ಪದವಿ ಕಾಲೇಜಿಗೆ ‘ಯುನಿವರ್ಸಿಟಿ ಬ್ಲೂ’ ಗೌರವ; ಕವಿವಿ ಕ್ರಿಕೆಟ್ ತಂಡಕ್ಕೆ ಅರ್ಸಲಾನ್ ಆಯ್ಕೆ
ಕಡಲ ಅಲೆಗಳ ನಡುವೆ ಕಂಗೊಳಿಸಿದ ಆರತಿಯ ಬೆಳಕು; ಮುರುಡೇಶ್ವರದಲ್ಲಿ ಭಕ್ತಿಸಾಗರ
ಕರಾವಳಿಯ ರೈಲು ಪ್ರಯಾಣಕ್ಕೆ ವಂದೇ ಭಾರತ್ ವೇಗದ ಸ್ಪರ್ಶ; ಮುರುಡೇಶ್ವರ ನಿಲ್ದಾಣದಲ್ಲಿ ಭವ್ಯ ಸ್ವಾಗತ