ಕೃಷ್ಣರಾಜಪೇಟೆ (ಮಂಡ್ಯ): ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ‘ಪ್ರಜಾ ಸೇವಾ ಆಂದೋಲನ’ ಕಾರ್ಯಕ್ರಮವನ್ನು ಪ್ರತಿ ಶನಿವಾರ ತಾಲೂಕಿನ ವಿವಿಧ ಹೋಬಳಿ ಕೇಂದ್ರಗಳಲ್ಲಿ ನಡೆಸುವ ಮೂಲಕ ಸರ್ಕಾರದ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ ಎಂದು ತಹಶೀಲ್ದಾರ್ ಶ್ರೇಯಸ್ ತಿಳಿಸಿದರು.
ಕೃಷ್ಣರಾಜಪೇಟೆ ತಾಲೂಕಿನ ಬೂಕನಕೆರೆ ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ‘ಪ್ರಜಾ ಸೇವಾ ಆಂದೋಲನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಜನರ ಅಹವಾಲುಗಳನ್ನು ಆಲಿಸಿ ಪಿಂಚಣಿ, ಪಹಣಿ ತಿದ್ದುಪಡಿ, ವಸತಿ ನಿವೇಶನ ಹಾಗೂ ಗ್ಯಾರಂಟಿ ಯೋಜನೆಗಳ 5 ಸೇವೆಗಳು ಸೇರಿದಂತೆ ವಿವಿಧ ಇಲಾಖಾ ಸೌಲಭ್ಯಗಳನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ನೀಡಲಾಗುವುದು. ಶ್ರೀಸಾಮಾನ್ಯರು ಹಾಗೂ ರೈತರು ಈ ಆಂದೋಲನದ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಹಶೀಲ್ದಾರ್ ಮನವಿ ಮಾಡಿದರು.
ಸೌಲಭ್ಯ ವಿತರಣೆ: ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ, ಅರಣ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಆರ್ಡಿಪಿಆರ್ ಸೇರಿದಂತೆ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ಉಪಸ್ಥಿತಿ: ತಾಲೂಕು ಪಂಚಾಯಿತಿ ಇಒ ಸುಷ್ಮಾ, ಇನ್ಸ್ಪೆಕ್ಟರ್ ಮಹೇಶ್, ಆರ್ಎಫ್ಒ ಅನಿತಾ, ಸಮಾಜ ಕಲ್ಯಾಣ ಇಲಾಖೆಯ ಎಡಿ ದಿವಾಕರ್, ಟಿಹೆಚ್ಒ ಡಾ. ಅಜಿತ್, ಡಾ. ಶ್ರೀನಿವಾಸ್ ಗೌಡ, ಉಪ ತಹಶೀಲ್ದಾರ್ ಜಗಧೀಶ್, ಆರ್ಐ ಚಂದ್ರಕಲಾ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
About The Author


More Stories
ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ಸಮರ್ಪಣೆ, ರಾಕಿ ಕಟ್ಟಿ ಗೌರವಿಸಿದ ಕೆ.ಆರ್.ಪೇಟೆ ಬಿಜೆಪಿ
ಕ್ರೈಸ್ಟ್ ದಿ ಕಿಂಗ್ ಪಿಯು ಕಾಲೇಜಿನಲ್ಲಿ ವಿದ್ಯಾಜ್ಯೋತಿ ಸಮಾರಂಭ: ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ
ಹೊಯ್ಸಳ ವಾಸ್ತುಶಿಲ್ಪ ಶೈಲಿಯಲ್ಲಿ ಕಲ್ಲಹಳ್ಳಿಯ ಶ್ರೀ ಲಕ್ಷ್ಮಿ ವರಹನಾಥ ದೇವಾಲಯ ಅಭಿವೃದ್ಧಿ: ಡಾ. ಶ್ರೀನಿವಾಸ ರಾಘವನ್