ಹೋನ್ನಾವರ : ತಾಲೂಕಿನ ಅಳ್ಳಂಕಿಯ ಸರಕಾರಿ ಪದವಿ ಪೂರ್ವ ಕಾಲೇಜು ಪಿ ಯು ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.
ಫಲಿತಾಂಶ ವಿವರ:
ಕಲಾ ವಿಭಾಗ – 100%
ವಾಣಿಜ್ಯ ವಿಭಾಗ – 100%
ವಿಜ್ಞಾನ ವಿಭಾಗ – 100%
ವಿಜ್ಞಾನ ವಿಭಾಗದಲ್ಲಿ 45 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಎಲ್ಲಾ 45 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 100% ಫಲಿತಾಂಶ ದಾಖಲಿಸಲಾಗಿದೆ. ವಿಜ್ಞಾನ ವಿಭಾಗದಲ್ಲಿ ಮೇಘಾ ಎಂ.ಎಸ್. (592 ಅಂಕ) ಪ್ರಥಮ, ಶ್ರೀನಿಧಿ ಶಾನಭಾಗ್ (583 ಅಂಕ) ದ್ವಿತೀಯ, ದೀಕ್ಷಾ ರಾಮಯ್ಯ ನಾಯ್ಕ (581 ಅಂಕ) ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 68 ವಿದ್ಯಾರ್ಥಿಗಳಲ್ಲಿ 68 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 100% ಫಲಿತಾಂಶ ದಾಖಲಾಗಿದೆ. ವೇದಾ ಪರಮೇಶ್ವರ ನಾಯ್ಕ (580 ಅಂಕ) ಪ್ರಥಮ, ವಿನಾಯಕ ರಾಮ ನಾಯ್ಕ (579 ಅಂಕ) ದ್ವಿತೀಯ ಮತ್ತು ಭವಿಕಾ ಶ್ರೀಧರ ಮಡಿವಾಳ (573 ಅಂಕ), ಸುಷ್ಮಿತಾ ರಾಮ ನಾಯ್ಕ (573 ಅಂಕ) ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 39 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 100% ಫಲಿತಾಂಶ ದಾಖಲಿಸಿದ್ದಾರೆ. ಅಂಕಿತಾ ಮಾರುತಿ ನಾಯ್ಕ (582 ಅಂಕ) ಪ್ರಥಮ, ಸಂತೋಷ ಪಾಂಡುರಂಗ ಗೌಡ (571 ಅಂಕ) ದ್ವಿತೀಯ ಮತ್ತು ಕಾವ್ಯ ವೆಂಕಟೇಶ್ ಮಡಿವಾಳ (555 ಅಂಕ) ತೃತೀಯ ಸ್ಥಾನ ಪಡೆದಿದ್ದಾರೆ.
ಕಾಲೇಜಿನ ಒಟ್ಟು 152 ವಿದ್ಯಾರ್ಥಿಗಳಲ್ಲಿ 55 ಡಿಸ್ಟಿಂಕ್ಷನ್, 87 ಪ್ರಥಮ ದರ್ಜೆ ಹಾಗೂ 10 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಷಯವಾರು ಅತ್ಯಧಿಕ ಅಂಕಗಳನ್ನು ಕನ್ನಡದಲ್ಲಿ 6, ಇತಿಹಾಸ 1, ಸಮಾಜಶಾಸ್ತ್ರ 2, ರಾಜ್ಯಶಾಸ್ತ್ರ 2, ಅರ್ಥಶಾಸ್ತ್ರ 1, ವ್ಯವಹಾರ ಅಧ್ಯಯನ 6, ಗಣಿತ 5 ಮತ್ತು ಜೀವಶಾಸ್ತ್ರ 2 ವಿದ್ಯಾರ್ಥಿಗಳು ಪಡೆದಿದ್ದಾರೆ.
ಒಟ್ಟು 152 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಸ್. ಹೆಗಡೆ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಚಂದ್ರಕಾಂತ ಕೊಚರೇಕರ ಅಭಿನಂದನೆ ಸಲ್ಲಿಸಿದ್ದಾರೆ. ಕಾಲೇಜಿನ ಶೈಕ್ಷಣಿಕ ಸಾಧನೆಗೆ ಶ್ರಮಿಸಿದ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ಬಳಗವನ್ನು ಕಾಲೇಜು ಅಭಿವೃದ್ಧಿ ಸಮಿತಿಯವರು ಪ್ರಶಂಸಿಸಿದ್ದಾರೆ.

More Stories
ಗುಣವಂತೆ ಶ್ರೀ ಶಂಭು ಶಂಭುಲಿಂಗೇಶ್ವರ ದೇವಾಲಯದಲ್ಲಿ ಧಾರ್ಮಿಕ ಸಭೆ ವೈಭವ
ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಶಿವಾಲಯ ಲೋಕಾರ್ಪಣೆ
ಸಿ.ಎ ಕನಸು ಹೊತ್ತ ಗ್ರಾಮೀಣ ಪ್ರತಿಭೆ ಚಿನ್ನಯಿ ಶೆಟ್ಟಿ, ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ