ಕುಮಟಾ : ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜನ್ಮ ಜಯಂತಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ನಾಗರಾಜ ಜಿ ನಾಯಕ ಅವರು ಅಂಬೇಡ್ಕರ್ ಅವರ ಆದರ್ಶಗಳು, ಸಂವಿಧಾನದ ಮಹತ್ವ ಮತ್ತು ಸಮಾಜ ಸುಧಾರಣೆಯಲ್ಲಿ ಅವರ ಕೊಡುಗೆ ಕುರಿತು ಮಾತನಾಡಿದರು.
ಎನ್. ರಾಮು ಹಿರೇಗುತ್ತಿ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ಮಾತನಾಡಿ ಅಂಬೇಡ್ಕರ್ ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಾನಕಿ ಗೊಂಡ, ಮಹಾದೇವ ಗೌಡ ಹಾಗೂ ಮಹಾತ್ಮ ಗಾಂಧಿ ಇಂಗ್ಲೀಷ್ ಮೀಡಿಯಂ ಸ್ಕೂಲಿನ ಶಿಕ್ಷಕರಾದ ಜಯಶ್ರೀ, ಶಿಲ್ಪಾ, ಶಶಿಕಲಾ, ನಾಗರತ್ನ, ಗೋಪಾಲಕೃಷ್ಣ ಗುನಗಾ ಮತ್ತು ಗೋವಿಂದ ನಾಯ್ಕ ಅವರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಇನ್ನಷ್ಟು ಗೌರವ ತಂದರು.

More Stories
ಮನೆ- ಮನವನ್ನು ಬೆಳಗಲು ಮನೆಗೊಂದು ಗ್ರಂಥಾಲಯ ಅವಶ್ಯ. -ಡಾ. ಮಾನಸ
ಬರ್ಗಿಯಲ್ಲಿ ಮನ್ನಣೆಯ ಮಣೆಯೇರಿದ ಗಾಯತ್ರಿ ಗೌಡ
ಡಾಕ್ಟರ್ ಮಾಮನೆಂದು ಇನ್ನು ಯಾರನ್ನು ಕರೆಯಲಿ? . ಅವರಿಗೆ ಅವರೇ ಸಾಟಿಯಾಗಿದ್ದರು.