

ಭಟ್ಕಳ (ಜುಲೈ 28): “ಸಮಾಜ ಸೇವೆಯೇ ರೋಟರಿಯ ಮೂಲ ಧ್ವೇಯವಾಗಿದ್ದು ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಯುವಜನ ಹಾಗೂ ಮಹಿಳಾ ಸಬಲೀಕರಣ, ವಿಪತ್ತು ಪರಿಹಾರ ಮತ್ತು ಸಮುದಾಯದ ಸಮಗ್ರ ಅಭಿವೃದ್ಧಿಗೆ ರೋಟರಿ ನಿರಂತರವಾಗಿ ಸೇವಾ ಕಾರ್ಯ ಕೈಗೊಳ್ಳುತ್ತಿದೆ” ಎಂದು ಮೆಡಿಕಲ್ ಕ್ಯಾಂಪ್ ಕರ್ನಾಟಕ ಜಿಲ್ಲಾ ಕಾರ್ಯದರ್ಶಿ ರೋಟೇರಿಯನ್ ಡಾ. ದಿನೇಶ್ ಹೆಗಡೆ ಹೇಳಿದರು.

ತಾಲೂಕಿನ ಅಮೀನಾ ಪ್ಯಾಲೇಸ್ ಸಭಾಂಗಣದಲ್ಲಿ ಜರುಗಿದ 2026-27ನೇ ಸಾಲಿನ ರೋಟರಿ ಮತ್ತು ಇಂಟರ್ಯಾಕ್ಟ್ ಕ್ಲಬ್‌ಗಳ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು, “ರೋಟರಿಯಲ್ಲಿ ಯಶಸ್ಸು ಹುದ್ದೆಯಿಂದ ಅಳೆಯಲ್ಪಡುವುದಿಲ್ಲ, ಸಮಾಜದಲ್ಲಿನ ಎಷ್ಟು ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ ಎಂಬುದರಿಂದ ಅಳೆಯಲ್ಪಡುತ್ತದೆ” ಎಂದರು. ರೋಟರಿ ಜಿಲ್ಲೆ 3170 ಉಪ ಗವರ್ನರ್ ಜೈವಿಠಲ್ ಕುಬಾಲ ಮಾತನಾಡಿ, “ಮುಂಬರುವ ರೋಟರಿ ವರ್ಷವೂ ಅರ್ಥಪೂರ್ಣ ಸೇವಾ ಯೋಜನೆಗಳು, ಸಮಾಜಮುಖಿ ಕಾರ್ಯಗಳು ಮತ್ತು ಜನೋಪಯೋಗಿ ಸಾಧನೆಗಳಿಂದ ಯಶಸ್ವಿಯಾಗಲಿ” ಎಂದು ಹಾರೈಸಿದರು.

ಸಾಧಕರಿಗೆ ಗೌರವ ಹಾಗೂ ಪುರಸ್ಕಾರ:
ಈ ಸಂದರ್ಭದಲ್ಲಿ ಶೈಕ್ಷಣಿಕ ವರ್ಷ 2025-26ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 99.36 ಅಂಕ ಗಳಿಸಿದ ತೇರ್ನಮಕ್ಕಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸಾನಿಕಾ ಬೈಲೂರು ಅವರಿಗೆ ಶ್ರೀ ಎಂ ಎ ಘನಿ ಸ್ಮಾರಕ ವಿದ್ಯಾರ್ಥಿ ವೇತನ, ಮತ್ತು ಶಾಲೆಗೆ ಶ್ರೀ ಜಯರಾಮ್ ಕೊಲ್ಲೆ ಸ್ಮಾರಕ ರೋಲಿಂಗ್ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು.

ಹಾಗೂ ವೃತ್ತಿಪರ ಕ್ಷೇತ್ರದ ಸಾಧನೆಗಾಗಿ:


ಪತ್ರಿಕೆ ವಿತರಕರು: ಶ್ರೀ ಫ್ರಾನ್ಸಿಸ್ ಡಿಸೋಜಾ
ಹೆಸ್ಕಾಂ ಲೈನ್ ಮ್ಯಾನ್: ಶ್ರೀ ಗೊಯ್ದ ಸನು ಗೊಂಡ
ಆರೋಗ್ಯ ಕ್ಷೇತ್ರ (ಸರ್ಕಾರಿ ಆಸ್ಪತ್ರೆ ಡಯಾಲಿಸಿಸ್ ಘಟಕ): ಶ್ರೀ ಭಾಸ್ಕರ್ ನಾಯ್ಕ್ ಮತ್ತು ಶ್ರೀಮತಿ ಭವಾನಿ ರಘು ಶೆಟ್ಟಿ
ಇವರಿಗೆ 2026-27ನೇ ಸಾಲಿನ ರೋಟರಿ ವೊಕೇಶನಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ಜೊತೆಗೆ ದಿವ್ಯಾಂಗರಿಗೆ ಪ್ರೇರಣೆಯಾಗಿರುವ ಸಂಗೀತ ಕ್ಷೇತ್ರದ ಸಾಧಕ ವಿಶೇಷ ವಿದ್ಯಾರ್ಥಿ ಶಾಯಲ್ ಗೋಮ್ಸ್ ಅವರನ್ನು ಸನ್ಮಾನಿಸಲಾಯಿತು ಮತ್ತು ನೂತನ ಸದಸ್ಯರನ್ನು ಬರಮಾಡಿಕೊಳ್ಳಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ:
2026-27ನೇ ಸಾಲಿನ ರೋಟರಿ ಕ್ಲಬ್ ಪದಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡವರು:
ಅಧ್ಯಕ್ಷರು: ರೋ. ಶ್ರೀನಾಥ್ ಪೈ
ಕಾರ್ಯದರ್ಶಿ: ರೋ. ಅನಂ ಅಲಾ
ಖಜಾಂಚಿ: ರೋ. ಮೊಹಮ್ಮದ್ ತಲ್ಹಾ ಶೇಖ್
ಕಾರ್ಯಕ್ರಮದಲ್ಲಿ ರೋಟರಿ ನಿಕಟಪೂರ್ವ ಅಧ್ಯಕ್ಷ ರೋ. ಶಾಗೀರ್ ಹುಸೇನ್ ತಾಹಿರ್ ಸ್ವಾಗತಿಸಿದರು. ರೋಟರಾಕ್ಟ್ ಭಟ್ಕಳ ನಿಕಟಪೂರ್ವ ಅಧ್ಯಕ್ಷೆ ನೇಹಾ ನಿರೂಪಿಸಿದರು. ರೋಟರಿ ನಿಕಟಪೂರ್ವ ಕಾರ್ಯದರ್ಶಿ ಮಿಸ್ಬಾ ಉಲ್ ಹಕ್ ಶೇಖೋಮರ್ 2025-26ನೇ ಸಾಲಿನ ರೋಟರಿ ಚಟುವಟಿಕೆಗಳ ಕುರಿತು ವಾರ್ಷಿಕ ವರದಿ ವಾಚಿಸಿದರು ಹಾಗೂ ರೋಟರಿ ಕಾರ್ಯದರ್ಶಿ ಅನಂ ಅಲಾ ವಂದಿಸಿದರು. ತಾಲೂಕಿನ ವಿವಿಧ ರೋಟರಿ, ರೋಟರಾಕ್ಟ್, ಇಂಟರ್ಯಾಕ್ಟ್ ಕ್ಲಬ್ ಸದಸ್ಯರು ಮತ್ತು ಸಂಯೋಜಕರು ಉಪಸ್ಥಿತರಿದ್ದರು.
About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ