September 8, 2026

ಫಿನ್‌ಲ್ಯಾಂಡ್‌ನಲ್ಲಿ ಚಿನ್ನದ ಪದಕ ಗೆದ್ದ ಗ್ರಾಮೀಣ ಪ್ರತಿಭೆ ಹೆಗ್ಗಡಹಳ್ಳಿ ಜಗನ್ನಾಥ್ ಹೆಚ್.ಎಂ

ಕಿಕ್ಕೇರಿ: ಫಿನ್‌ಲ್ಯಾಂಡ್‌ನ ಲಾಹ್ತಿಯಲ್ಲಿ ನಡೆದ ಅಂತರಾಷ್ಟ್ರೀಯ ಅಂಕವಿಲರ ಪ್ಯಾರಾ ಟೇಬಲ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಹೆಗ್ಗಡಹಳ್ಳಿ ಗ್ರಾಮದ ಯುವಕ ಜಗನ್ನಾಥ್ ಹೆಚ್.ಎಂ ಪ್ರಥಮ ಸ್ಥಾನ ಗಳಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಸಾಧನೆಯ ವಿವರ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೆಗ್ಗಡಹಳ್ಳಿಯ ಮಂಜೇಗೌಡ ಅವರ ಪುತ್ರ ಜಗನ್ನಾಥ್ ಎಚ್.ಎಂ, ಪುರುಷರ ಸಿಂಗಲ್ಸ್ ವೀಲ್ ಚೇರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಆಗಸ್ಟ್ 28 ರಿಂದ 30 ರವರೆಗೆ ಫಿನ್‌ಲ್ಯಾಂಡ್‌ನಲ್ಲಿ ನಡೆದ ಈ ಕೂಟದ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಗಳಿಸುವ ಮೂಲಕ ಮಂಡ್ಯ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯದ ಗೌರವವನ್ನು ಹೆಚ್ಚಿಸಿದ್ದಾರೆ.

    ಈ ಅದ್ಭುತ ಸಾಧನೆಗೈದ ಗ್ರಾಮೀಣ ಪ್ರತಿಭೆ ಜಗನ್ನಾಥ್ ಅವರಿಗೆ ತಾಲೂಕಿನ ಗಣ್ಯರು ಹಾಗೂ ಸಾರ್ವಜನಿಕರು ಶುಭ ಹಾರೈಸಿದ್ದಾರೆ.           ವರದಿ : ಶಂಭು ಕಿಕ್ಕೆರಿ

    About The Author

    error: Content is protected !!