ಗೋಕರ್ಣ: ಪ್ಲಾಸ್ಟಿಕ್ ಅತ್ಯಂತ ಹಾನಿಕಾರಕ ಎಂದು ವಿಜ್ಞಾನ ಹೇಳುತ್ತಿದ್ದರೂ ಅದು ಇಂದು ನಮ್ಮನ್ನು ಎಲ್ಲೆಡೆಯಿಂದ ಆವರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬದಲಾವಣೆಯು ಬೇರೆಯವರಿಂದಲ್ಲ, ನಮ್ಮ ಮನೆಯಿಂದ ಮತ್ತು ನಮ್ಮಿಂದಲೇ ಆರಂಭವಾಗಬೇಕಿದ್ದು, ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಧೈರ್ಯವನ್ನು ನಾವು ತೋರಬೇಕಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.










ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆಪ್ಟೆಂಬರ್ 14, 2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ನೀಡಿದರು.
ಕಲಿಯುಗದ ಲಕ್ಷಣ ಹಾಗೂ ಪ್ಲಾಸ್ಟಿಕ್ ಅಪಾಯ: ಉತ್ತಮವಾದುದನ್ನು ಕೆಡಿಸಿ, ಹಾನಿಕಾರಕವಾದುದನ್ನು ಸಮಾಜಕ್ಕೆ ನೀಡುವುದೇ ಕಲಿಯುಗದ ಲಕ್ಷಣವಾಗಿದೆ. ಪ್ಲಾಸ್ಟಿಕ್ ಹಾಗೂ ಕೃತಕ ವಸ್ತುಗಳು ಅಪಾಯಕಾರಿ ಎಂದು ತಿಳಿದಿದ್ದರೂ ಅವುಗಳ ಬಳಕೆ ನಿಲ್ಲುತ್ತಿಲ್ಲ. ಕುಡಿಯುವ ನೀರನ್ನು ಶುದ್ಧೀಕರಿಸುವ ‘RO ಪ್ಯೂರಿಫೈಯರ್’ಗಳು ಸಹ ಪ್ಲಾಸ್ಟಿಕ್‌ನಿಂದಲೇ ಆವೃತವಾಗಿವೆ.
ಆಯುರ್ವೇದದಲ್ಲಿ ಜಲ ಶುದ್ಧೀಕರಣ: ಆಯುರ್ವೇದದಲ್ಲಿ ನಿರ್ವಾಪಣ, ಕ್ವಥನ, ಪ್ರಸಾದನ ಮುಂತಾದ ನೈಸರ್ಗಿಕ ಕ್ರಮಗಳ ಮೂಲಕ ನೀರನ್ನು ಶುದ್ಧೀಕರಿಸುವ ವಿಧಾನಗಳನ್ನು ಸೂಚಿಸಲಾಗಿದೆ. ಕತಕ, ಗೋಮೇಧಿಕ, ಶೈವಾಲಮೂಲ, ಸ್ಪಟಿಕ ಮಣಿಗಳು ಹಾಗೂ ನೈಸರ್ಗಿಕ ಹೂವು-ಸುಗಂಧ ದ್ರವ್ಯಗಳನ್ನು ಬಳಸಿ ನೀರಿನ ಮೌಲ್ಯ ಹೆಚ್ಚಿಸುವ ಸಾಂಪ್ರದಾಯಿಕ ಮಾರ್ಗಗಳನ್ನು ಶ್ರೀಗಳು ವಿವರಿಸಿದರು.

ಪ್ಲಾಸ್ಟಿಕ್ ನಿಷೇಧದ ಕುರಿತು ಜಗತ್ತೇ ಮಾತನಾಡುತ್ತಿದ್ದರೂ ಪ್ರಾಯೋಗಿಕ ಜಾರಿಯಾಗುತ್ತಿಲ್ಲ. ಆದ್ದರಿಂದ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಬದಲಾವಣೆ ತಂದುಕೊಳ್ಳುವ ಮೂಲಕ ಕೊನೇ ಪಕ್ಷ ನಮ್ಮ ಜೀವನವನ್ನು ಉತ್ತಮವಾಗಿರಿಸಿಕೊಳ್ಳಲು ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
About The Author


More Stories
ಅರಿವಿನ ಬದುಕಿಗೆ ದೇಸಿ ಗೋವಿನ ತುಪ್ಪ ಅಗತ್ಯ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ
ಬಾಯಾರಿದವರಿಗೆ ನೀರು ನೀಡುವುದು ಶ್ರೇಷ್ಠ ಯಜ್ಞ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ
ಉಷಃಪಾನ ಹಾಗೂ ನಾಸಾಪಾನದಿಂದ ಶತಾಯುಷಿ ಜೀವನ ಸಾಧ್ಯ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ