ಒಟ್ಟು 17 ಪ್ರಶಸ್ತಿಗಳೊಂದಿಗೆ ತಾಲೂಕಿನಲ್ಲಿ ಅತ್ಯಧಿಕ ಸ್ಥಾನ ಗಳಿಸಿದ ಸಾಧನೆ; ಆಡಳಿತ ಮಂಡಳಿಯಿಂದ ಅಭಿನಂದನೆ
ಅಥಣಿ: ಸತ್ತಿ ಗ್ರಾಮದಲ್ಲಿ ನವೆಂಬರ್ 7, 2026ರಂದು ಜರುಗಿದ ಅಥಣಿ ತಾಲೂಕಿನ ಉರ್ದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಅಥಣಿಯ ಅಬುಲ್ ಕಲಾಂ ಉರ್ದು ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.

ಒಟ್ಟು 8 ಪ್ರಥಮ, 5 ದ್ವಿತೀಯ ಹಾಗೂ 4 ತೃತೀಯ ಸ್ಥಾನ ಸೇರಿದಂತೆ ಒಟ್ಟು 17 ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಶಾಲೆಯ ವಿದ್ಯಾರ್ಥಿಗಳು, ತಾಲೂಕಿನಲ್ಲಿಯೇ ಅತಿ ಹೆಚ್ಚು ಬಹುಮಾನಗಳನ್ನು ಪಡೆದಿದ್ದಾರೆ. ಈ ಸಾಧನೆಯ ಮೂಲಕ ಶಾಲೆಯು ಸತತ ಎರಡನೇ ಬಾರಿಗೆ ಉರ್ದು ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ.

ವಿಜೇತ ವಿದ್ಯಾರ್ಥಿಗಳ ವಿವರ:
ಪ್ರಥಮ ಸ್ಥಾನ (08):
- ಮುಬಶಿರಾ ಎಂ. ಜಮಾದಾರ: ದೇಶಭಕ್ತಿ ಗೀತೆ
- ಐಮನ ಎಂ. ಬಾಗವಾನ: ಕವನ ವಾಚನ
- ಮಹ್ಮದ ಇಲಿಯಾಸ್ ಎಸ್. ಶೇಖ್: ಮಿಮಿಕ್ರಿ
- ಓವೇಸ್ ಐ. ಕೋರ್ಬು: ಧಾರ್ಮಿಕ ಪಠಣ
- ಬುಶ್ರಾ ಟಿ. ಮನಗೋಳಿ: ಭಕ್ತಿ ಗೀತೆ
- ಸುಫೀಯಾ ಎಂ. ಮುಲ್ಲಾ: ಪ್ರಬಂಧ
- ಆಯಿಶಾ ಆರ್. ಬಾಗವಾನ: ಕಥೆ ಹೇಳುವುದು
- ಮುಬಶ್ಶಿರಾ ಎಂ. ಜಮಾದಾರ: ಭಕ್ತಿ ಗೀತೆ
ದ್ವಿತೀಯ ಸ್ಥಾನ (05):
- ಸುಫಿಯಾ ಎಸ್. ಸುತಗುಂಡಿ: ಛದ್ಮವೇಷ
- ಮುಫೀಜಾ ಐ. ಸಾತಬಚ್ಚೆ: ದೇಶಭಕ್ತಿ ಗೀತೆ
- ಫ್ರಜೀನ ಎ. ನಾಲಬಂದ: ಕಂಠಪಾಠ (ಉರ್ದು)
- ಫಾಯಿಜಾ ಜೆ. ನಾಲಬಂದ: ಬಹುಮಾನ ವಿಜೇತರು
- ಸಿಮ್ರಾ ಜೆ. ಹುಳಗಬಾಳ: ಕಂಠಪಾಠ (ಉರ್ದು)
ತೃತೀಯ ಸ್ಥಾನ (04):
- ಅಪ್ಶೀನ ಎ. ಮೌಲ್ವಿ: ಅಭಿನಯ ಗೀತೆ
- ಸದಪ್ ಜೆ. ಮೀರ್ಜಿ: ಕಂಠಪಾಠ (ಕನ್ನಡ)
- ಅಲೀಷಾ ಎಂ. ಆಸಂಗಿ: ಚಿತ್ರಕಲೆ
- ಅಕ್ಸಾ ಐ. ಮೋಮಿನ: ಕಂಠಪಾಠ (ಕನ್ನಡ)
ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಅವರಿಗೆ ಸೂಕ್ತ ತರಬೇತಿ ನೀಡಿದ ಶಿಕ್ಷಕ ವೃಂದಕ್ಕೆ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಮುಖ್ಯೋಪಾಧ್ಯಾಯರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ವರದಿ : ಮಹೇಶ ಶರ್ಮ

More Stories
ಪ್ರಮುಖ ವೃತ್ತಗಳಲ್ಲಿ ಮಿತಿಮೀರಿದ ಟ್ರಾಫಿಕ್ ಕಿರಿಕಿರಿ; ಮೇಲ್ಸೇತುವೆ, ಬೈಪಾಸ್ ರಸ್ತೆ ನಿರ್ಮಾಣಕ್ಕೆ ಆಗ್ರಹ
ಹಿರಿಯ ಪತ್ರಕರ್ತ ವಿ.ಎಸ್. ಕೃಷ್ಣಸ್ವಾಮಿ ಅವರಿಗೆ 74ನೇ ಹುಟ್ಟುಹಬ್ಬದ ಸಂಭ್ರಮ: ಶಿವಶಕ್ತಿ ಪತ್ರಿಕಾ ಬಳಗದಿಂದ ಆತ್ಮೀಯ ಸನ್ಮಾನ
ಅಥಣಿ: ಎಂ.ಜಿ. ಮಾರ್ಕೆಟ್ನಲ್ಲಿ ಅರ್ಧಕ್ಕೆ ನಿಂತ ಶೌಚಾಲಯ ಕಾಮಗಾರಿ; ವ್ಯಾಪಾರಸ್ಥರು, ಸಾರ್ವಜನಿಕರಿಂದ ಆಕ್ರೋಶ