ರಡ್ಡೇರಹಟ್ಟಿ (ಅಥಣಿ): ಶಾಲಾ ಶಿಕ್ಷಣ ಇಲಾಖೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ 2026-27ನೇ ಸಾಲಿನ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಇಲ್ಲಿನ ಎಸ್.ಎಸ್.ಎಂ.ಎಸ್. (SSMS) ಪದವಿಪೂರ್ವ ಕಾಲೇಜಿನ ಬಾಲಕಿಯರ ಕಬಡ್ಡಿ ತಂಡವು ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ.
ರಾಷ್ಟ್ರಮಟ್ಟಕ್ಕೆ ತಲುಪಿದ ಪ್ರತಿಭೆಗಳು: ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾಲೇಜಿನ ಕ್ರೀಡಾಪಟುಗಳಾದ ಕುಮಾರಿ ಅನಿತಾ ಹಾಗೂ ಭಾಗ್ಯಶ್ರೀ ರಾಷ್ಟ್ರಮಟ್ಟದ ಕಬಡ್ಡಿ ಕೂಟಕ್ಕೆ ಆಯ್ಕೆಯಾಗಿದ್ದಾರೆ. ತರಬೇತುದಾರರಾದ ಶೃತಿ ಸುರೇಶ್ ಪಾಟೀಲ್ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಸಾಧನೆಗೆ ರಿಯಾ, ವೇದಾಂತ್ ಹಾಗೂ ಭಕ್ತಿ ಸಾಥ್ ನೀಡಿದ್ದಾರೆ.
ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ: ಸಾಧನೆಗೈದ ಕಾಲೇಜಿನ ತಂಡ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರನ್ನು ರಡ್ಡೇರಹಟ್ಟಿಯಲ್ಲಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು. ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಹಾಗೂ ಸಮಾಜಸೇವಕಿ ಶ್ರೀ ಸರಸ್ವತಿ ನ್ಯಾಮಗೌಡ ಅವರು ವಿಜೇತರನ್ನು ಗೌರವಿಸಿ, ರಾಷ್ಟ್ರಮಟ್ಟದ ಪಂದ್ಯಾವಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ವೀರಗೌಡ, ಪ್ರಿಯಾಂಕಾ, ಪ್ರಮುಖ ಪದಾಧಿಕಾರಿ ಗೀತಾ, ಬಿಜೆಪಿ ತಾಲೂಕು ಘಟಕದ ಮಹಿಳಾ ಕಾರ್ಯಕರ್ತರು, ಗ್ರಾಮದ ಹಿರಿಯರು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

(ವರದಿ: ಮಹೇಶ್ ಶರ್ಮಾ)
About The Author


More Stories
ಮೊಳೆ ಗ್ರಾಮದ ಶಾಲೆಗೆ ಹಳೆ ವಿದ್ಯಾರ್ಥಿಗಳ ಕೊಡುಗೆ: ಡೆಸ್ಕ್ ಹಾಗೂ ಕಂಪ್ಯೂಟರ್ ನೀಡಿ ಋಣ ತೀರಿಸಿದ ಹಿರಿಯ ವಿದ್ಯಾರ್ಥಿಗಳು
ಅಥಣಿಯಲ್ಲಿ ‘ಕಣ್ಣಾಮುಚ್ಚಾಲೆ’ ಆಟ: ಜಿ-ಮಾರ್ಟ್ ಎದುರು ಅರ್ಧಕ್ಕೇ ನಿಂತ ಶೌಚಾಲಯ ಕಾಮಗಾರಿ – ಮಹಿಳೆಯರ ಪರದಾಟ, ಸಾರ್ವಜನಿಕರ ಆಕ್ರೋಶ
ಲೋಡ್ಶೆಡ್ಡಿಂಗ್ ವಿರುದ್ಧ ಪ್ರತಿಭಟನೆ: ರೈತರ ಪಂಪ್ಸೆಟ್ಗಳಿಗೆ 7 ಗಂಟೆ ತ್ರಿ-ಫೇಸ್ ವಿದ್ಯುತ್ ಪೂರೈಕೆಗೆ ಚಿಕ್ಕೋಡಿಯಲ್ಲಿ ಕರವೇ ಆಗ್ರಹ