ಮಡಿಕೇರಿ: ವಿಶ್ವಪ್ರಸಿದ್ಧ ಮಡಿಕೇರಿ ದಸರಾ ಮಹೋತ್ಸವದ ನಿಮಿತ್ತ ಕೆಎಸ್‌ಆರ್‌ಟಿಸಿ ಸಂಸ್ಥೆಯು ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಿದ್ದು, ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಒಳಗೊಂಡ ‘ಒಂದು ದಿನದ ವಿಶೇಷ ಪ್ಯಾಕೇಜ್ ಟೂರ್’ ಆಯೋಜಿಸಿದೆ.
ಈ ವಿಶೇಷ ಪ್ರವಾಸ ಸೇವೆಯು ಅಕ್ಟೋಬರ್ 11ರಿಂದ 26ರವರೆಗೆ ಲಭ್ಯವಿರಲಿದ್ದು, ಮಡಿಕೇರಿ ಬಸ್ ನಿಲ್ದಾಣದಿಂದ ಪ್ರತಿದಿನ ಬೆಳಿಗ್ಗೆ 6:30ಕ್ಕೆ ಬಸ್ ಹೊರಟು, ವಿವಿಧ ತಾಣಗಳನ್ನು ವೀಕ್ಷಿಸಿದ ನಂತರ ರಾತ್ರಿ 7:30ಕ್ಕೆ ಮಡಿಕೇರಿಗೆ ವಾಪಸಾಗಲಿದೆ.
ಎರಡು ಪ್ರಮುಖ ಪ್ಯಾಕೇಜ್‌ಗಳ ವಿವರ:
ಕಾವೇರಿ ದರ್ಶನ’ ಪ್ಯಾಕೇಜ್:

ವೀಕ್ಷಿಸುವ ತಾಣಗಳು: ಓಂಕಾರೇಶ್ವರ ದೇವಸ್ಥಾನ, ಇಗ್ಗುತಪ್ಪ ದೇವಸ್ಥಾನ, ಭಾಗಮಂಡಲ ದೇವಸ್ಥಾನ, ಪವಿತ್ರ ತಲಕಾವೇರಿ, ಅಬ್ಬಿ ಜಲಪಾತ ಹಾಗೂ ರಾಜಾಸೀಟು.
ಕೊಡಗಿನ ಸೊಬಗು’ ಪ್ಯಾಕೇಜ್:
ವೀಕ್ಷಿಸುವ ತಾಣಗಳು: ಓಂಕಾರೇಶ್ವರ ದೇವಸ್ಥಾನ, ಹಾರಂಗಿ ಜಲಾಶಯ/ಆನೆ ಕ್ಯಾಂಪ್, ಕುಶಾಲನಗರದ ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಕಾಫಿ ಪ್ಲಾಂಟೇಶನ್, ಅಬ್ಬಿ ಜಲಪಾತ ಹಾಗೂ ರಾಜಾಸೀಟು.
ಟಿಕೆಟ್ ದರ ಹಾಗೂ ಬುಕ್ಕಿಂಗ್:
ಪ್ರಯಾಣ ದರ: ವಯಸ್ಕರಿಗೆ ₹400 ಹಾಗೂ ಮಕ್ಕಳಿಗೆ (6 ರಿಂದ 12 ವರ್ಷ) ₹300 ನಿಗದಿಪಡಿಸಲಾಗಿದೆ.
ವಿಶೇಷ ಸೂಚನೆ: ಈ ದರದಲ್ಲಿ ಪ್ರಯಾಣ ವೆಚ್ಚ ಮಾತ್ರ ಸೇರಿದ್ದು, ಊಟೋಪಚಾರ ಹಾಗೂ ಪ್ರವಾಸಿ ತಾಣಗಳ ಪ್ರವೇಶ ಶುಲ್ಕ (Entry Fee) ಒಳಗೊಂಡಿರುವುದಿಲ್ಲ.
ಕರ್ನಾಟಕ ಸಾರಿಗೆ ಬಸ್‌ಗಳ ಮೂಲಕ ಈ ಸೇವೆ ಲಭ್ಯವಿದ್ದು, ಪ್ರವಾಸಿಗರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದಾಗಿದೆ (Advance Booking).
ವರದಿ: ಪ್ರಿತುನ್ ಪೂವಣ್ಣ
About The Author


More Stories
‘ಸಮಸ್ತ’ ಆ್ಯಪ್ ತಾಂತ್ರಿಕ ದೋಷ ಖಂಡಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ: ಕಾನೂನು ಸುವ್ಯವಸ್ಥೆ ಪಾಲನೆಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ
₹85 ಲಕ್ಷ ವೆಚ್ಚದ ಸಂಪಿಗೆಕಟ್ಟೆ-ಮಹಾದೇವಪೇಟೆ ಸಂಪರ್ಕ ರಸ್ತೆ ಶಾಸಕ ಡಾ. ಮಂತರ್ ಗೌಡ ಉದ್ಘಾಟನೆ