November 22, 2026

ಕೊಡಗು ಜಿಲ್ಲಾ ‘ಅಹಿಂದ ಬಳಗ’ಕ್ಕೆ ನೂತನ ಪದಾಧಿಕಾರಿಗಳ ನೇಮಕ

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಅಹಿಂದ ಸಮುದಾಯಗಳ ಸಂಘಟನೆ ಹಾಗೂ ಬಲವರ್ಧನೆಯ ಉದ್ದೇಶದಿಂದ ಅಹಿಂದ ಬಳಗದ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ನಾಪಂಡ ಮುತ್ತಪ್ಪ ತಿಳಿಸಿದ್ದಾರೆ.

ನೇಮಕಗೊಂಡ ನೂತನ ಪದಾಧಿಕಾರಿಗಳ ವಿವರ:                                        ಉಪಾಧ್ಯಕ್ಷರು: ಎಚ್.ಎಂ. ನಂದಕುಮಾರ್, ಬಿ.ಇ. ಜಯೇಂದ್ರ, ಬಾಪು ಮಾಯಾಮುಡಿ, ರಾಜೇಶ್ ವಿರಾಜಪೇಟೆ, ಅರುಣ್ ರಾವ್ ಹಾಗೂ ವಿಕ್ಟರ್ ಜಾನ್ಸನ್.

ಹಿರಿಯ ಸಲಹೆಗಾರರು: ಕೆ.ಕೆ. ಮಂಜುನಾಥ್ ಕುಮಾರ್, ಕೆ.ಎಂ. ಯಾಕೂಬ್, ಆದಂ ಸೋಮವಾರಪೇಟೆ, ಕೋಯ ಹೊಸತೋಟ, ವೈ.ಟಿ. ಪರಮೇಶ್ ಹಾಗೂ ರಾಜಪ್ಪ ಮೆಣಸ ಬೆಟ್ಟ.

ಸಂಘಟನಾ ಕಾರ್ಯದರ್ಶಿಗಳು: ರವಿ ಅಜ್ಜಳ್ಳಿ, ಅಬ್ಬಾಸ್ ಶನಿವಾರಸಂತೆ, ಮುದ್ದು ರಾಜ್ ಮಡಿಕೇರಿ, ನಿತೀಶ್ ಗೋಣಿಕೊಪ್ಪ, ರಜನಿಕಾಂತ್ ವಿರಾಜಪೇಟೆ ಹಾಗೂ ಅಶೋಕ್ ಗೋಪಾಲಪುರ.

ಕಾರ್ಯದರ್ಶಿಗಳು: ಕೆ.ಎಂ. ಸೈಯದ್ ಬಾವ ಹಾಗೂ ಅಶ್ರಫ್ ಕುಶಾಲನಗರ.

ಸಾಮಾಜಿಕ ಜಾಲತಾಣ ಸಂಚಾಲಕರು: ಪ್ರಿತುನ್ ಪೂವಣ್ಣ ಅಯ್ಯನೆರವಂಡ.

ಮಹಿಳಾ ಸಂಘಟನಾ ಕಾರ್ಯದರ್ಶಿ: ಸುಪ್ರೀತ ನೀರುಗುಂದ.

    ಇವರೊಂದಿಗೆ ಸಮಿತಿ ಸದಸ್ಯರಾಗಿ ಮಂಜು ಕೂಡಿಗೆ, ವಿಜಿ ಅಳುವಾರ, ಆನಂದ್ ರಾಜ್ ತಣ್ಣೀರುಹಳ್ಳ, ಯೇಸು ಬಸವನಹಳ್ಳಿ, ರಾಜಶೇಖರ ಶನಿವಾರಸಂತೆ, ಜಗದೀಶ್ ಕೊಡ್ಲಿಪೇಟೆ, ಜೆ.ಆರ್. ಪಾಲಾಕ್ಷ, ಯೋಗೇಶ್ ಚೆನ್ನಯ್ಯನಕೋಟೆ, ದಾಮೋದರ ಮಾದಾಪಟ್ಟಣ, ಹೊನ್ನಪ್ಪ ಚೌಡ್ಲು, ಚಂದು ಸಬ್ಬನ್ ಕೊಪ್ಪ, ದಾಮೋದರ ಬೆಳಕಿಕೊಪ್ಪ ಹಾಗೂ ರತನ್ ಹಾನಗಲ್ ಆಯ್ಕೆಯಾಗಿದ್ದಾರೆ.

    ಮುಂದಿನ ಹಂತದಲ್ಲಿ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲೂ ನೂತನ ಸಮಿತಿಗಳನ್ನು ರಚಿಸಿ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಲಾಗುವುದು ಎಂದು ನಾಪಂಡ ಮುತ್ತಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ವರದಿ: ಪ್ರಿತುನ್ ಪೂವಣ್ಣ)

    About The Author

    error: Content is protected !!