ಕರವೇ ಸ್ವಾಭಿಮಾನಿ ಸೇನೆಯಿಂದ ಆತ್ಮೀಯ ಸ್ವಾಗತ ಹಾಗೂ ಸನ್ಮಾನ
ಕುಶಾಲನಗರ (ಕೊಡಗು): ಕುಶಾಲನಗರ ತಾಲೂಕಿನ ನೂತನ ತಹಶೀಲ್ದಾರರಾಗಿ ಅಧಿಕಾರ ವಹಿಸಿಕೊಂಡ ರಮೇಶ್ ಬಾಬು ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಲಾಯಿತು.

ತಾಲೂಕು ಕಂದಾಯ ಇಲಾಖೆಯ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಘಟನೆಯ ಪದಾಧಿಕಾರಿಗಳು ನೂತನ ತಹಶೀಲ್ದಾರರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಿದರು.

ಜನಪರ ಆಡಳಿತಕ್ಕೆ ಪ್ರಾಮಾಣಿಕ ಯತ್ನ: ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ತಹಶೀಲ್ದಾರ್ ರಮೇಶ್ ಬಾಬು, “ತಾಲೂಕಿನ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಜನಪರವಾಗಿ ಕಾರ್ಯನಿರ್ವಹಿಸುವುದು ನನ್ನ ಮುಖ್ಯ ಗುರಿಯಾಗಿದೆ. ಕಂದಾಯ ಇಲಾಖೆಯ ಕೆಲಸ ಕಾರ್ಯಗಳನ್ನು ಸುಗಮಗೊಳಿಸಲು ಹಾಗೂ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಸಾರ್ವಜನಿಕರ ಬೆಂಬಲದೊಂದಿಗೆ ಉತ್ತಮ ಹಾಗೂ ಪಾರದರ್ಶಕ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದರು.
ಕಾರ್ಯಕ್ರಮದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ಕೊಡಗು ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಣಿಕಂಠ, ಜಿಲ್ಲಾ ಖಜಾಂಚಿ ಅಂತೋನಿ, ತಾಲೂಕು ಅಧ್ಯಕ್ಷ ಕೆ.ಎಸ್. ಶಿವ, ಉಪಾಧ್ಯಕ್ಷ ನಾಸಿರ್, ತಾಲೂಕು ಸಂಘಟಕ ವಿ.ಪಿ. ಚಂದ್ರು, ಮಹಿಳಾ ಘಟಕದ ತಾಲೂಕು ಉಪಾಧ್ಯಕ್ಷೆ ದಿವ್ಯ ಡಿಸೋಜ, ತಾಲೂಕು ಗೌರವಾಧ್ಯಕ್ಷೆ ನಾಗರತ್ನ, ನಗರ ಘಟಕದ ಗೌರವಾಧ್ಯಕ್ಷ ವಿಲ್ಸನ್ ಸೇರಿದಂತೆ ಪ್ರಮುಖರಾದ ಆರ್ಮಿ ದಿನೇಶ್, ರಫೀಕ್, ಜೈರುದ್ದೀನ್, ಅನಿಫ್, ಪ್ರಶಾಂತ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

More Stories
ಬಸ್ ತಂಗುದಾಣವೋ ಅಥವಾ ವಿಷಜಂತುಗಳ ಆವಾಸಸ್ಥಾನವೋ? ಕಾಡು ಪೊದೆ ತೆರವಿಗೆ ಕರವೇ ಸ್ವಾಭಿಮಾನಿ ಸೇನೆ ಆಗ್ರಹ
ಅಪಾಯದ ಹಂತದಲ್ಲಿರುವ ವಿದ್ಯುತ್ ಕಂಬ ಬದಲಾಯಿಸಲು ಕರವೇ ಆಗ್ರಹ
ಶೇ. 60ರಷ್ಟು ಕನ್ನಡ ಕಡ್ಡಾಯ ನಿಯಮ ಉಲ್ಲಂಘನೆ: ಒಂದು ವಾರದೊಳಗೆ ಫಲಕ ಬದಲಾಯಿಸಲು ಪುರಸಭೆ ಎಚ್ಚರಿಕೆ