November 22, 2026

ಹಿರಿಯ ಪತ್ರಕರ್ತ ವಿ.ಎಸ್. ಕೃಷ್ಣಸ್ವಾಮಿ ಅವರಿಗೆ 74ನೇ ಹುಟ್ಟುಹಬ್ಬದ ಸಂಭ್ರಮ: ಶಿವಶಕ್ತಿ ಪತ್ರಿಕಾ ಬಳಗದಿಂದ ಆತ್ಮೀಯ ಸನ್ಮಾನ

ನಾಡಿನ ಪತ್ರಕರ್ತರ ಹಿತಕ್ಕಾಗಿ ಶ್ರಮಿಸುತ್ತಿರುವ ಹಿರಿಯ ಚೇತನಕ್ಕೆ ಗೌರವ ಸಮರ್ಪಣೆ

ಕರ್ನಾಟಕ ರಾಜ್ಯ ದಲಿತ ಪತ್ರಕರ್ತರ ವೇದಿಕೆಯ ಗೌರವಾಧ್ಯಕ್ಷ ಹಾಗೂ ‘ನಾಳೆ ಬಾ’ ಪತ್ರಿಕೆಯ ಸಂಪಾದಕರಾದ ಹಿರಿಯ ಪತ್ರಕರ್ತ ವಿ.ಎಸ್. ಕೃಷ್ಣಸ್ವಾಮಿ ಅವರ 74ನೇ ಹುಟ್ಟುಹಬ್ಬದ ಅಂಗವಾಗಿ ‘ಶಿವಶಕ್ತಿ’ ಪತ್ರಿಕಾ ಬಳಗದ ವತಿಯಿಂದ ನವೆಂಬರ್ 9ರಂದು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಶುಭ ಕೋರಲಾಯಿತು.

‘ಶಿವಶಕ್ತಿ’ ಪತ್ರಿಕೆಯ ಪ್ರಧಾನ ಸಂಪಾದಕ ಆರ್. ಶಿವಕುಮಾರ್, ಹಿರಿಯರಾದ ರಂಗಪ್ಪ ಹಾಗೂ ಉಪ ಸಂಪಾದಕ ಮಹೇಶ್ ಶರ್ಮಾ ಅವರು ವಿ.ಎಸ್. ಕೃಷ್ಣಸ್ವಾಮಿ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಿದರು.

ನಾಡಿನ ಪತ್ರಕರ್ತರ ಹಕ್ಕುಗಳು ಹಾಗೂ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ವಿ.ಎಸ್. ಕೃಷ್ಣಸ್ವಾಮಿ ಅವರ ಪತ್ರಿಕಾ ಸೇವೆ ಹಾಗೂ ಸಂಘಟನಾ ಚಾತುರ್ಯ ಶ್ಲಾಘನೀಯ. ಹಲವಾರು ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿ ಮುನ್ನಡೆಯುತ್ತಿರುವ ಅವರಿಗೆ ಭಗವಂತನು ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ‘ಶಿವಶಕ್ತಿ’ ಪತ್ರಿಕಾ ತಂಡವು ಶುಭ ಹಾರೈಸಿದೆ. ವರದಿ : ಮಹೇಶ ಶರ್ಮ

About The Author

error: Content is protected !!