ರಾಜಕೀಯ ಆಡಂಬರಕ್ಕಾಗಿ ಬಡ ಕಾರ್ಮಿಕರ ಸೌಲಭ್ಯ ತಡೆಹಿಡಿಯುವುದು ಸರಿಯಲ್ಲ; ಕಾರ್ಮಿಕ ಇಲಾಖೆ ಸ್ಪಷ್ಟನೆ ನೀಡಲು ಆಗ್ರಹ
ಹೊನ್ನಾವರ (ಉತ್ತರ ಕನ್ನಡ): ಹೊನ್ನಾವರದ ಕಾರ್ಮಿಕ ಇಲಾಖೆಯಲ್ಲಿ ಇಂದು ಬಡ ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು ಎರಡು ತಿಂಗಳಿಂದ ಕಿಟ್ ಗಳನ್ನ ವಿತರಿಸಿದೆ ಇಂದು ವಿಧಾನಸಭಾ ಉಪ ಸಭಾಧ್ಯಕ್ಷರಾದ ಮಂಕಾಳ ಎಸ್ ವೈದ್ಯ ಅವರ ಉಪಸ್ಥಿತಿಯಲ್ಲಿ ಕಿಟ್ ವಿತರಣೆ ಮಾಡಲಾಯಿತು.

ಕಾರ್ಮಿಕರಿಗೆ ತಲುಪಬೇಕಾದ ಸರ್ಕಾರಿ ಕಿಟ್‌ಗಳ ವಿತರಣೆಯಲ್ಲಿ ರಾಜಕೀಯ ಆಡಂಬರಕ್ಕೆ ಆದ್ಯತೆ ನೀಡಿ ಎರಡು ತಿಂಗಳಿಗೂ ಹೆಚ್ಚು ಕಾಲ ವಿಳಂಬ ಮಾಡಲಾಗಿದೆ ಎಂದು ಆರೋಪಿಸಿರುವ ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ಬಲ್ಸೆ, ವಿಧಾನಸಭೆ ಉಪಸಭಾಪತಿ ಹಾಗೂ ಶಾಸಕ ಮಂಕಾಳ ಎಸ್. ವೈದ್ಯ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಹೊನ್ನಾವರದ ಕಾರ್ಮಿಕ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕಿದ್ದ ಸರ್ಕಾರಿ ಕಿಟ್‌ಗಳನ್ನು ಎರಡು ತಿಂಗಳಿಗೂ ಹೆಚ್ಚು ಕಾಲ ಕಚೇರಿಯಲ್ಲೇ ಸಂಗ್ರಹಿಸಿಟ್ಟಿರುವುದು ಬಡ ಕಾರ್ಮಿಕರಿಗೆ ಅನಗತ್ಯ ತೊಂದರೆ ಉಂಟುಮಾಡಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ನೀಡುವ ಸೌಲಭ್ಯಗಳು ಸಕಾಲದಲ್ಲಿ ಫಲಾನುಭವಿಗಳ ಕೈ ಸೇರಬೇಕೇ ಹೊರತು, ಜನಪ್ರತಿನಿಧಿಗಳ ಕಾರ್ಯಕ್ರಮಕ್ಕಾಗಿ ಬಡವರು ಕಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಸೌಲಭ್ಯ ಜನರ ಹಕ್ಕು: “ಉಪಸಭಾಪತಿ ಮಂಕಾಳ ವೈದ್ಯ ಅವರ ಉಪಸ್ಥಿತಿಯಲ್ಲೇ ವಿತರಣಾ ಕಾರ್ಯಕ್ರಮ ನಡೆಸಬೇಕೆಂಬ ಕಾರಣಕ್ಕೆ ಕಿಟ್ ವಿತರಣೆಯನ್ನು ತಡೆಹಿಡಿಯಲಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಜನಪ್ರತಿನಿಧಿಗಳು ಇಲ್ಲದಿದ್ದರೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸಕಾಲದಲ್ಲಿ ಕಿಟ್ ವಿತರಿಸಬಹುದಿತ್ತು. ಸರ್ಕಾರದ ಯೋಜನೆಗಳು ಜನರ ತೆರಿಗೆ ಹಣದಿಂದ ಒದಗಿಸಲಾಗುವ ಹಕ್ಕುಗಳೇ ಹೊರತು, ಯಾವುದೇ ರಾಜಕೀಯ ನಾಯಕರ ವೈಯಕ್ತಿಕ ಕೊಡುಗೆಯಲ್ಲ” ಎಂದು ಕಿಡಿಕಾರಿದ್ದಾರೆ.
“ಒಂದು ಕಿಟ್‌ಗಾಗಿ ಬಡ ಕಾರ್ಮಿಕರು ತಿಂಗಳುಗಟ್ಟಲೆ ಇಲಾಖೆಗೆ ಅಲೆದಾಡುವ ದುಃಸ್ಥಿತಿ ಬದಲಾಗಬೇಕು. ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ, ಅರ್ಹರಿಗೆ ತಕ್ಷಣ ಸೌಲಭ್ಯ ತಲುಪಿಸಬೇಕು. ಈ ವಿಳಂಬಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಇಲಾಖೆ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಹಾಗೂ ಮುಂದೆ ಇಂತಹ ಲೋಪಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು” ಎಂದು ಮಾಸ್ತಪ್ಪ ನಾಯ್ಕ ಬಲ್ಸೆ ಒತ್ತಾಯಿಸಿದ್ದಾರೆ.

More Stories
ಮಾಜಿ ಸೈನಿಕ, ನಾಮಧಾರಿ ಸಮಾಜದ ಹಿರಿಯ ಮುಖಂಡ ವಾಮನ ನಾಯ್ಕ ಮಂಕಿ ನಿಧನ
ಹೊನ್ನಾವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಗೆ ಜಿಲ್ಲೆಯ ‘ಉತ್ತಮ ಅರ್ಬನ್ ಬ್ಯಾಂಕ್’ ಪ್ರಶಸ್ತಿ
ಹೊನ್ನಾವರ: ಕೋಟೆಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜೃಂಭಣೆಯ ‘ಮಕ್ಕಳ ಹಬ್ಬ’