November 22, 2026

ರೈತರು ಸಂಘಟಿತರಾದರೆ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ – ರೈತ ಮುಖಂಡ ಕೆ.ಕೆ.ಹಟ್ಟಿ ದೇವರಮನೆ ಮಹೇಶ

ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ರೈತ ಸಂಘದಿಂದ ಪ್ರಗತಿಪರ ವಿಚಾರಗಳ ತರಬೇತಿ ಕಾರ್ಯಾಗಾರ ಯಶಸ್ವಿ

ಕೂಡ್ಲಿಗಿ (ವಿಜಯನಗರ ಜಿಲ್ಲೆ): “ದೇಶದ ಬೆನ್ನೆಲುಬಾಗಿರುವ ರೈತರು ಇಂದು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಏಳ್ಗೆ ಹೊಂದಬೇಕಿದೆ. ರೈತರು ಸಂಘಟಿತರಾಗಿ ಜಾಗೃತರಾದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಸಾಧ್ಯ. ರೈತರು ಪ್ರಗತಿ ಹೊಂದಿದಾಗ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ” ಎಂದು ರೈತ ಮುಖಂಡ ಹಾಗೂ ಹೋರಾಟಗಾರ ಕೆ.ಕೆ.ಹಟ್ಟಿ ದೇವರಮನೆ ಮಹೇಶ ಅಭಿಪ್ರಾಯಪಟ್ಟರು.

ಕೂಡ್ಲಿಗಿ ಪಟ್ಟಣದಲ್ಲಿ ರೈತ ಸಂಘದ ವತಿಯಿಂದ ರೈತರಿಗಾಗಿ ಆಯೋಜಿಸಲಾಗಿದ್ದ ವಿವಿಧ ಪ್ರಗತಿಪರ ವಿಚಾರಗಳ ಕುರಿತಾದ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಂಡಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ರೈತ ಸಂಘದ ರಾಜ್ಯಾಧ್ಯಕ್ಷ ದೇವಿಗನಹಳ್ಳಿ ಹನುಮಂತಪ್ಪ ಕಾರ್ಯಾಗಾರದ ನೇತೃತ್ವ ವಹಿಸಿದ್ದರು.

ವೇದಿಕೆಯಲ್ಲಿ ಸ್ನೇಹಿತರ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಾ. ಅಬ್ದುಲ್ ರಹಮಾನ್, ರೈತ ಸಂಘದ ಕಾನೂನು ಸಲಹೆಗಾರರು ಹಾಗೂ ಹಿರಿಯ ವಕೀಲರಾದ ಹೆಚ್.ಎಂ. ಪಂಡಿತರಾಧ್ಯ ಸೇರಿದಂತೆ ಮುಖಂಡರು ಉಪಸ್ಥಿತರಿದ್ದು ರೈತರಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಾಗಾರದಲ್ಲಿ ಪ್ರಮುಖರಾದ ಬಿ.ಕೆ. ಕುಮಾರಸ್ವಾಮಿ, ಹೊಸಪೇಟೆಯ ಬಿ. ಶೇಕಪ್ಪ, ಸಗೇನಹಳ್ಳಿ ಬಸವರಾಜ, ಇಮ್ಮಡಾಪುರ ಬಾಲರಾಜ, ಲೋಕೇಶ, ಕಾಳಾಪುರ ಹುಲುಗಪ್ಪ, ಆರೋಹನಹಳ್ಳಿ ನಾಗಪ್ಪ ಹಾಗೂ ಎಮ್. ದುರುಗಪ್ಪ ಸೇರಿದಂತೆ ಕೂಡ್ಲಿಗಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಕ್ಷೇತ್ರಗಳಿಂದ ಆಗಮಿಸಿದ್ದ ನೂರಾರು ರೈತರು ಮತ್ತು ರೈತ ಮುಖಂಡರು ಉತ್ಸಾಹದಿಂದ ಭಾಗವಹಿಸಿದ್ದರು.

– ವರದಿ: ವಂದೇ ಮಾತರಂ ವಿ.ಜಿ. ವೃಷಭೇಂದ್ರ, ಕೂಡ್ಲಿಗಿ

About The Author

error: Content is protected !!