March 4, 2026

ನೌಕರರ ನಡುವೆ ಕ್ರಿಕೆಟ್ ಕದನ: ಭಟ್ಕಳದಲ್ಲಿ ಮೂರು ದಿನಗಳ EMPLOYEES ಲೀಗ್

ಭಟ್ಕಳ: ತಾಲೂಕು ಸರಕಾರಿ ನೌಕರರ ಕ್ರೀಡಾ ಚಟುವಟಿಕೆಗಳಿಗೆ ಹೊಸ ಉತ್ಸಾಹ ತುಂಬುವ ಉದ್ದೇಶದಿಂದ ಲೀಗ್ ಮಾದರಿಯ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ BHATKAL EMPLOYEES LEAGUE–2026 (SEASON–2) ಅನ್ನು ಸರಕಾರಿ ನೌಕರರ ಕ್ರೀಡಾ ಸಮಿತಿ, ಭಟ್ಕಳ ಆಶ್ರಯದಲ್ಲಿ ಆಯೋಜಿಸಲಾಗಿದೆ.
ಈ ಕ್ರಿಕೆಟ್ ಲೀಗ್ 2026ರ ಜನವರಿ 9, 10 ಮತ್ತು 11ರಂದು ಭಟ್ಕಳದ ಪೊಲೀಸ್ ಮೈದಾನ, ಭಟ್ಕಳದಲ್ಲಿ ನಡೆಯಲಿದೆ.

ಭಟ್ಕಳ ತಾಲೂಕಿನಲ್ಲಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಖಾಯಂ ನೌಕರರು ಮಾತ್ರವಲ್ಲದೆ, ಭಟ್ಕಳದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಬೇರೆ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ನೌಕರರಿಗೂ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿದೆ.


ಲೀಗ್ ಮಾದರಿಯಲ್ಲಿ ನಡೆಯುವ ಈ ಟೂರ್ನಮೆಂಟ್‌ನಲ್ಲಿ ಹಲವು ತಂಡಗಳು ಪರಸ್ಪರ ಸ್ಪರ್ಧಿಸಿ ಕ್ರೀಡಾ ಕೌಶಲ್ಯ ಪ್ರದರ್ಶಿಸಲಿವೆ. ಪಂದ್ಯಾವಳಿಯ ವಿಜೇತ ತಂಡಕ್ಕೆ ನಗದು ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೂ ನಗದು ಬಹುಮಾನ ಹಾಗೂ ಟ್ರೋಫಿ ಪ್ರದಾನ ಮಾಡಲಾಗುವುದು. ಜೊತೆಗೆ ಸರಣಿ ಶ್ರೇಷ್ಠ ಆಟಗಾರರು ಮತ್ತು ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.


ಪಂದ್ಯಾವಳಿ ಕುರಿತು ಹೆಚ್ಚಿನ ಮಾಹಿತಿಗಾಗಿ ಸಮಿತಿಯ ಅಧ್ಯಕ್ಷ ಗಣೇಶ ಹೆಗಡೆ (9481132491) ಹಾಗೂ ಕಾರ್ಯದರ್ಶಿ ಪುರಷೋತ್ತಮ ನಾಯ್ಕ (8217018211) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

About The Author

error: Content is protected !!