March 2, 2026

ಭಟ್ಕಳದಲ್ಲಿ ಫೆ. ೨೨ರಂದು ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆ


ಭಟ್ಕಳ: ಕ್ರೀಡಾಭಿಮಾನಿಗಳಿಗೆ ಹಬ್ಬದ ಸಂಭ್ರಮ ಮೂಡಿಸುವಂತೆ ರಾಜ್ಯಮಟ್ಟದ ದೇಹದಾರ್ಡ್ಯ (ಬಾಡಿಬಿಲ್ಡಿಂಗ್) ಸ್ಪರ್ಧೆ ಫೆಬ್ರವರಿ ೨೨ರಂದು ಸಂಜೆ ೬ ಗಂಟೆಗೆ ಪಟ್ಟಣದ ಆನಂದಾಶ್ರಮ ಶಾಲಾ ಮೈದಾನದಲ್ಲಿ ನಡೆಯಲಿದೆ.


ಒಟ್ಟು ಎಂಟು ವಿಭಾಗಗಳಲ್ಲಿ ಆಯೋಜಿಸಲಾದ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ೨೫೦ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಸ್ಪರ್ಧೆಯ ಪೋಸ್ಟರ್ ಬಿಡುಗಡೆಗೊಳಿಸಿ ಬಾಡಿಬಿಲ್ಡಿಂಗ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನಾಯ್ಕ ಮಾಹಿತಿ ನೀಡಿದರು.


ಸ್ಪರ್ಧೆಯನ್ನು ನ್ಯಾಯಸಮ್ಮತವಾಗಿ ನಡೆಸಲು ರಾಜ್ಯದ ವಿವಿಧ ಭಾಗಗಳಿಂದ ೨೫ರಿಂದ ೩೦ ಮಂದಿ ಅನುಭವಿ ರೆಫ್ರಿಗಳನ್ನು ನಿಯೋಜಿಸಲಾಗಿದೆ. ಉತ್ತಮ ಆರೋಗ್ಯ, ಶ್ರೇಷ್ಠ ದೈಹಿಕ ಸಾಮರ್ಥ್ಯ ಹಾಗೂ ಫಿಟ್ ಜೀವನಶೈಲಿಯ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಸಂಜೆ ೬ ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಬಳಿಕ ವಿವಿಧ ವಿಭಾಗಗಳ ಸ್ಪರ್ಧೆಗಳು ನಡೆಯಲಿವೆ. ಸಚಿವ ಮಂಕಾಳ ವೈದ್ಯ ಅವರ ಸಹಕಾರದಿಂದ ತಾಲೂಕಿನಲ್ಲಿ ಈ ರೀತಿಯ ರಾಜ್ಯಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಜಿಜುರ್ ರಹಮಾನ್, ಗೌರವಾಧ್ಯಕ್ಷ ನಜೀರ ಕಾಶಿಮ್ ಜಿ, ಸದಸ್ಯರಾದ ಗಣೇಶ ನಾಯ್ಕ, ಫಾಸ್ಕಲ್ ಗೋಮ್ಸ್, ರಾಘವೇಂದ್ರ ಗೊಂಡ, ವಿವೇಕ ನಾಯ್ಕ ಸೇರಿದಂತೆ ಇತರ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

About The Author

error: Content is protected !!