ಕುಮಟಾ : ತಮ್ಮ ಬಹುಕಾಲದ ಒಡನಾಡಿಯಾಗಿದ್ದ ವಯೋ ಸಹಜ ಅನಾರೋಗ್ಯದಲ್ಲಿ ವಿಶ್ರಾಂತಿಯಲ್ಲಿರುವ ಕುಮಟಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಹಿರೇಗುತ್ತೀಯ ಬೀರಣ್ಣ ಮಾಸ್ತರರನ್ನು ಶಹರದ ಹೆರವಟ್ಟಾದಲ್ಲಿನ ಅವರ ಸ್ವನಿವಾಸ ” ಪರ್ವತಗಂಗಾ ” ದಲ್ಲಿ ಅಂಕೋಲಾದ ನವ ಕರ್ನಾಟಕ ಸಂಘ ಹಾಗೂ ಶ್ರೀರಾಮ್ ಸ್ಟಡಿ ಸರ್ಕಲ್ ನ ಪ್ರತಿಷ್ಠಿತ ಬಾಪು ಸದ್ಭಾವನ ಪುರಸ್ಕಾರ ಪುರಸ್ಕೃತ ವಿಶ್ರಾಂತ ಅಧ್ಯಾಪಕರಾದ ನಾಡುಮಾಸ್ಕೇರಿಯ ವಿ.ಡಿ. ನಾಯಕ ವಂದಿಗೆಯವರು ಭೇಟಿಯಾಗಿ, ಕುಶಲೋಪಚಾರವನ್ನು ವಿಚಾರಿಸಿ, ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ತನ್ನೂರಿನ ಶ್ರೀ ಶಾಂತಿಕಾ ಪರಮೇಶ್ವರಿಯ ಅನುಗ್ರಹಿಸಲಿ ಎಂದು ಆಶಿಸಿ, ಆತ್ಮೀಯವಾಗಿ ಗೌರವಿಸಿದರು.
ಬೀರಣ್ಣ ಮಾಸ್ತರರೂ ತಮ್ಮ ನಿವಾಸಕ್ಕೆ ಆಗಮಿಸಿದ ಗೆಳೆಯ ವಿ.ಡಿ.ನಾಯಕರವರನ್ನು ಅಷ್ಟೇ ಆಪ್ತವಾಗಿ ಬರಮಾಡಿಸಿಕೊಂಡು, ಅವರನ್ನು ಹಾಗೂ ಅವರ ಜೊತೆಯಲ್ಲಿದ್ದ ಸಂಸ್ಕೃತ ಅಧ್ಯಾಪಕರಾದ ಖ್ಯಾತ ಲೇಖಕ – ವಾಗ್ಮಿ ಮಂಜುನಾಥ ಗಾಂವ್ಕರ್ ಬರ್ಗಿಯವರನ್ನು ನಲ್ಮೆಯಿಂದ ಆದರಿಸಿ, ಬೀಳ್ಕೊಟ್ಟರು.
About The Author


More Stories
ಹಿರೇಗುತ್ತಿಯಲ್ಲಿ 14 ವಯೋಮಾನದ ಬಾಲಕ-ಬಾಲಕಿಯರ ಇಲಾಖಾ ಕ್ರೀಡಾಕೂಟ
ಎನ್. ರಾಮು ಹಿರೇಗುತ್ತಿಗೆ ಒಲಿದ ‘ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್’
ಸಂಪನ್ನಗೊಂಡ ಮಿರ್ಜಾನ್ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ