

ಭಟ್ಕಳ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ದೂರು ದಾಖಲಾಗಿದೆ.
ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹಿರೇಬೆಂಡೆಗಿರಿಯ ನಿವಾಸಿ ಹಜರತ್ ಅಲಿ ತಹಶಿಲ್ದಾರ ಹಾಗೂ ಧಾರವಾಡ ಜಿಲ್ಲೆಯ ಕಳಘಟಗಿ ತಾಲೂಕಿನ ನಾಲಬಂಧ ಓಣಿಯ ಮೊಹಮ್ಮದ ಆಸೀಪ್ (32) ಆರೋಪಿತರಾಗಿದ್ದಾರೆ.

ಶಿರಾಲಿಯಿಂದ ಭಟ್ಕಳ ಕಡೆಗೆ ಟಾಟಾ ಲಾರಿಯಲ್ಲಿ ಸುಮಾರು ₹14 ಲಕ್ಷ ಮೌಲ್ಯದ 14 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ, ನೀರು ಮತ್ತು ಹುಲ್ಲು ನೀಡದೆ, ವಧೆ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಸಾಗಾಟಕ್ಕೆ ಅಗತ್ಯ ಪರವಾನಿಗೆ ಪಡೆಯಲಾಗಿರಲಿಲ್ಲ ಎನ್ನಲಾಗಿದೆ.
ಪರಿಶೀಲನೆ ವೇಳೆ ಹಜರತ್ ಅಲಿ ತಹಶಿಲ್ದಾರ ಪರಾರಿಯಾಗಿದ್ದು, ಚಾಲಕ ಮೊಹಮ್ಮದ ಆಸೀಪ್ ವಾಹನ ಸಮೇತ ಪತ್ತೆಯಾಗಿದ್ದಾನೆ.
ಈ ಸಂಬಂಧ ಸಿಪಿಐ ಮಲ್ಲಿಕಾರ್ಜುನಯ್ಯ ಕೊರಾಣಿ ಅವರು ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ದೂರು ದಾಖಲಿಸಿದ್ದಾರೆ.

About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ