ಭಟ್ಕಳ: ಹೈದರಾಬಾದ್ ಮೂಲದ ವಂದನ ಎಂಬ ಮಹಿಳೆ ರಚಿಸಿರುವ ಮಹಾ ಮುರುಡೇಶ್ವರ ಹಾಗೂ ರಾಜಗೋಪುರದ ಅದ್ಭುತ ಚಿತ್ರಕಲೆ ಭಕ್ತರ ಮನಸೂರೆಗೊಂಡಿದೆ.
ಮಹಾ ಮುರುಡೇಶ್ವರ ಶಿವನ ಭವ್ಯ ಪ್ರತಿಮೆ ಹಾಗೂ ದೇವಸ್ಥಾನದ ರಾಜಗೋಪುರವನ್ನು ಸ್ಥಳದಲ್ಲಿಯೆ ಒಂದೇ ಚಿತ್ರಪಟದಲ್ಲಿ ಆಕರ್ಷಕವಾಗಿ ಮೂಡಿಸಿರುವುದು ಈ ಕೃತಿಯ ವಿಶೇಷತೆ. ಚಿತ್ರದಲ್ಲಿ ಮುರುಡೇಶ್ವರ ದೇವಾಲಯದ ಮಹಾದೇವನ ಮೂರ್ತಿಯನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿರುವುದು ಗಮನ ಸೆಳೆಯುತ್ತದೆ.
ಇನ್ನೊಂದೆಡೆ, ರಾಜಗೋಪುರದ ಕಲಾತ್ಮಕ ವಿನ್ಯಾಸವನ್ನೂ ಸೂಕ್ಷ್ಮ ರೇಖಾಚಿತ್ರಗಳ ಮೂಲಕ ಮನೋಜ್ಞವಾಗಿ ಮೂಡಿಸಲಾಗಿದೆ. ವಂದನ ಅವರ ಈ ಚಿತ್ರಕಲೆ ಭಕ್ತರಲ್ಲಿ ಭಕ್ತಿ ಭಾವನೆ ಹೆಚ್ಚಿಸುವುದರ ಜೊತೆಗೆ, ಕಲಾ ಪ್ರೇಮಿಗಳಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.
About The Author


More Stories
ಯುವಕರಲ್ಲಿ ಕ್ರೀಡಾ ಪ್ರೇಮ ಬೆಳೆಸಿಕೊಳ್ಳಬೇಕು: ರಾಜು ಮಂಜಪ್ಪ ನಾಯ್ಕ
ಅನಾಥವಾಗಿ ಕೊನೆಯುಸಿರೆಳೆದ ಭಿಕ್ಷುಕ: ಕುಟುಂಬಸ್ಥರು ಬಾರದ ಹಿನ್ನೆಲೆ ಸಮಾಜ ಸೇವಕರಿಂದ ಅಂತ್ಯಕ್ರಿಯೆ
ನಿನಾದ ಕಲ್ಚರಲ್ ಅಕಾಡೆಮಿಗೆ ‘ಉತ್ತಮ ಸೇವಾ ಸಂಸ್ಥೆ’ ಪ್ರಶಸ್ತಿ ಪ್ರದಾನ