ಹೊನ್ನಾವರ: ತಾಲೂಕಿನ ಎಸ್.ಡಿ.ಎಂ.ಪದವಿ ಪೂರ್ವ ಕಾಲೇಜು ವಾಣಿಜ್ಯ ವಿಭಾಗದಲ್ಲಿ ಚಿನ್ಮಯಿ ಮಂಜುನಾಥ ಶೆಟ್ಟಿ 99.33% ಪಡೆದು ರಾಜ್ಯಕ್ಕೆ 5 ಸ್ಥಾನ ಪಡೆದಿರುತ್ತಾಳೆ. ವಿಜ್ಞಾನ ವಿಭಾಗದಲ್ಲಿ ಶ್ರೀರಾಮ್ ತಿಮ್ಮಣ್ಣ ಭಟ್ 97.50% ಪಡೆದು ಪ್ರಥಮ ಸ್ಥಾನ, ಪ್ರಜ್ಞಾ ವೆಂಕಟರಮಣ ಭಟ್ 96.67% ದ್ವಿತೀಯ ಸ್ಥಾನ ಹಾಗೂ ರಚನಾ ಹನುಮಂತ ನಾಯ್ಕ 95.67 % ಮತ್ತು ಸಹನಾ ಮಂಜುನಾಥ್ ಗೌಡ 95.67 % ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಚಿನ್ಮಯಿ ಮಂಜುನಾಥ್ ಶೆಟ್ಟಿ 99.33% ಪ್ರಥಮ ಸ್ಥಾನ, ಭೂಮಿಕಾ ವೆಂಕಟೇಶ್ ಕಾಮತ್ 98.83% ದ್ವಿತೀಯ ಸ್ಥಾನ ,ಪ್ರತಿಕ್ಷಾ ಎಸ್ ನಾಯ್ಕ 97.67% ಅಂಕ ಪಡೆದು ತೃತೀಯ ಸ್ಥಾನ ಪಡೆದಿರುತ್ತಾರೆ. ಕಲಾ ವಿಭಾಗದಲ್ಲಿ ವೈಷ್ಣವಿ ನಾಗೇಶ ನಾಯ್ಕ 97.17% ಶ್ರೇಯಾ ಮಂಜುನಾಥ್ ನಾಯ್ಕ 96%, ಸಂಜನಾ ಗಜಾನನ ನಾಯ್ಕ 92.83% ಅಂಕ ಪಡೆದಿರುತ್ತಾರೆ. ಕಾಲೇಜಿನ ಫಲಿತಾಂಶ 91.88% ಆಗಿರುತ್ತದೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಸದಸ್ಯರು, ಪ್ರಾಚಾರ್ಯ ಹಾಗೂ ಬೋಧಕ -ಬೋಧಕೇತರ ಸಿಬ್ಬಂದಿಗಳು ಶುಭ ಹಾರೈಸಿದ್ದಾರೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಗುಣವಂತೆ ಶ್ರೀ ಶಂಭು ಶಂಭುಲಿಂಗೇಶ್ವರ ದೇವಾಲಯದಲ್ಲಿ ಧಾರ್ಮಿಕ ಸಭೆ ವೈಭವ
ಶ್ರೀ ಶಂಭು ಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಶಿವಾಲಯ ಲೋಕಾರ್ಪಣೆ
ಸಿ.ಎ ಕನಸು ಹೊತ್ತ ಗ್ರಾಮೀಣ ಪ್ರತಿಭೆ ಚಿನ್ನಯಿ ಶೆಟ್ಟಿ, ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ